ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮ

0
619

ಬೆಂಗಳೂರು/ ಮಹದೇವಪುರ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಸಲುವಾಗಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನೃತ್ಯೋತ್ಸವ ಕರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳು ಭೀನ್ನ ವಿಭಿನ್ನ ರೀತಿಯ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪೋಷಕರು ಹಾಗೂ ನೆರೆದಿದ್ದ ಜನರನ್ನು ಆಕರ್ಷಿಸಿದರು. ಹಾಗಿದ್ದರೆ ಬನ್ನಿ ನಾವು ಓಮ್ಮೆ ನೃತ್ಯೋತ್ಸವನ್ನು ನೋಡಿ ಬರೋಣ.

ಕಲರ್ಫುಲ್ ವೇದಿಕೆಯಲ್ಲಿ ಮಕ್ಕಳು ವಿವಿಧ ಗೀತಿಗಳಿಗೆ ಅದ್ಬುತವಾಗಿ ಭರತನಾಟ್ಯ ನೃತ್ಯ ಪ್ರದರ್ಶಿಸುತ್ತಿರುವ ದೃಶ್ಯಗಳು ಕಂಡುಬಂದದ್ದು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ. ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ಮಹದೇವಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎರಡು ದಿನಗಳ ಕಾಲ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೂರಾರು ನೃತ್ಯ ತಂಡಗಳು ಈ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನೃತ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಚಿತ್ರ ನಟಿ ಮತ್ತು ಭರತನಾಟ್ಯಗಾರ್ತಿ ಸುಧಾಚಂದ್ರ ಭಾಗವಹಿಸಿದ್ದು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳು ಅಗಾದ ಪ್ರತಿಭೆಯನ್ನು ಹೊಂದಿದ್ದು, ಪ್ರತಿಭೆಯ ಅನಾವರಣಕ್ಕೆ ಸಮರ್ಪಕ ವೇದಿಕೆಯ ಕೊರೆತೆಯಿದೆ, ಪೋಷಕರು ಮಕ್ಕಳ ಪ್ರತಿಭೆಯನ್ನು ಹೊರ ತೆಗೆವ ಕಾರ್ಯ ಮಾಡುವಲ್ಲಿ ನಿರತರಾಗಬೇಕು ಎಂದರು. ಈ ನೃತ್ಯೋತ್ಸವದಲ್ಲಿ ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ಯುವ ವಯಸ್ಕರು ಸೇರಿ 80 ತಂಡಗಳು ಭಾಗವಹಿಸಿದ್ದವು, ಎರಡುದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಯಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳನ್ನು ಮಕ್ಕಳು ಪ್ರದಶಿಸಿದರು. ಮಕ್ಕಳ ಉತ್ಸುಕತೆ, ನೃತ್ಯ ಪ್ರದರ್ಶನ ನೆರೆದಿದ್ದವರ ಮನ ಸೆಳೆಯಿತು.

LEAVE A REPLY

Please enter your comment!
Please enter your name here