ಸಾಧನಾ ಸಮಾವೇಶ…

0
234

ಬಳ್ಳಾರಿ /ಹೊಸಪೇಟೆ:ಸೆಪ್ಟೆಂಬರ್ ೧ರಿಂದ ಮುಂದಿನ ವಿಧಾನಸಭಾ ಚುನಾವಣೆವರೆಗೂ ಮನೆ ಕಡೆ ಮುಖ ಮಾಡದೆ ನಿರಂತರ ಗ್ರಾಮ, ಸ್ಲಂನಲ್ಲಿ ವಾಸ್ತವ್ಯ ಮಾಡಲಾಗುವು ದು ಎಂದು ಹೊಸಪೇಟೆ ಬಿಜೆಪಿ ಶಾಸಕ ಆನಂದ್ ಸಿಂಗ್ ಶಪಥ ಮಾಡಿದ್ದಾರೆ. ಬಳ್ಳಾರಿಯ ಹೊಸಪೇಟೆಯಲ್ಲಿ ಕ್ಷೇತ್ರದ ವರುಷದ ಸಾಧನಾ ಸಮಾವೇಶದಲ್ಲಿ ಮಾತನಾಡಿ, ವಿಜಯನಗರ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರತಿ ಗ್ರಾಮ, ವಾರ್ಡ್, ಸ್ಲಂಗಳಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಸೆಪ್ಟೆಂಬರ್ ೧ರಿಂದ ಎಂಟು ತಿಂಗಳ ಕಾಲ ಮನೆಗೆ ಹೋಗದೆ ಕ್ಷೇತ್ರಾದ್ಯಂತ ಸಂಚರಿಸಲಿದ್ದೇನೆ. ಕೋರ್ಟ್ ವಿಚಾರಣೆಯಿದ್ದ ಪಕ್ಷದಲ್ಲಿ ಅನಿವಾರ್ಯವಾಗಿ ಹಾಜರಾಗಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಒಂದು ಲಕ್ಷ ಮತಗಳನ್ನು ಪಡೆಯಬೇಕು ಎಂಬ ಗುರಿಯಿದೆ ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ಆನಂದ್ ಸಿಂಗ್, ರಾಜ್ಯದ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಎಂದು ತೆಗಳಿದರು.

ಬೈಟ್ ೧ – ಬಿ ಎಸ್ ಆನಂದ್ ಸಿಂಗ್, ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ

LEAVE A REPLY

Please enter your comment!
Please enter your name here