ಸಾಮರಸ್ಯ ಪಥ ಸಂಚಲನೆ..

0
233

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮೂಲಕ ಸಾಗಿ ಕರ್ನಾಟಕ ಮತ್ತು ಸ್ವದೇಶಿ ಜಾಗರ್ ಮಂಚ್ ಮತ್ತು ರಾಷ್ಟೀಯ ಸ್ವಯಂ ಸೇವಕ ವತಿಯಿಂದ ನಡೆದ ಪಥ ಸಂಚಲನೆ.ಮೊದಲ ಬಾರಿಗೆ ಶಿಡ್ಲಘಟ್ಟದಲ್ಲಿ ಹೊಸ ಉಡುಪಿನ ಪ್ಯಾಂಟ್ ಧರಿಸಿ, ತಲೆಗೊಂದು ಟೋಪಿ ಕೈಲೊಂದು ಕೋಲು ಹಿಡಿದು ಬಸವೇಶ್ವರ ದೇವಸ್ಥಾನದಿಂದ ಪಥ ಸಂಚಲನದಲ್ಲಿ ಸಾಗಿದ್ದು ವಿಶೇಷವಾಗಿ ನೋಡುಗರನ್ನು ಗಮನ ಸೆಳೆಯಿತು.ದೇಶದಲ್ಲಿ ಪ್ರತಿಯೊಬ್ಬರು ಐಕ್ಯತೆಯಿಂದ ಕೂಡಿ ಬಾಳುವಂತ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಸಲುವಾಗಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಮುಖ್ ಶಿಡ್ಲಘಟ್ಟ ದೇವರಾಜ್ ತಿಳಿಸಿದರು. ಪಥ ಸಂಚಲನದಲ್ಲಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ ನಂದೀಶ್, ಬಿಜೆಪಿ ಮುಖಂಡರಾದ ಶಿವಕುಮಾರ್ ಗೌಡ,ನಾರ್ಥ್ ಈಸ್ಟ್ ಪ್ರಾಪರ್ಟಿ ಸುರೇಶ್, ರಾಜ್ಯ ಕಮಿಟಿ ಸದಸ್ಯ ದಾಮೊದರ್, ಕಾರ್ಯ ನಿರತ ಪತ್ರಕರ್ತ ಸಂಘದ ಹಾಗೂ ವರದಿಗಾರರಾದ ರೂಪಸಿ ರಮೇಶ್,ಎಲ್ ಮುತ್ತುಕದಹಳ್ಳಿ ಬೈಯಾರೆಡ್ಡಿ,ಹಾಗೂ ಬಹಳಷ್ಷು ಜನರು ಭಾಗವಹಿಸಿದ್ದರು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೋಲಿಸ್ ಬಂದೋ ವಸ್ತು ಮಾಡಲಾಗಿತ್ತು. ಆರಕ್ಷಕ ವೃತ್ತ ನಿರೀಕ್ಷಿತ ವೆಂಕಟೇಶ್ ರವರ ನೇತೃತ್ವದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣೆ ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆ ವಿಜಯದ ರೆಡ್ಡಿ ಹಾಗೂ ಹಲವಾರು ಪೋಲಿಸರು ಹಾಜರಿದ್ದರು.

LEAVE A REPLY

Please enter your comment!
Please enter your name here