ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿಗಾಗಿ ಜಟಾಪಟಿ..!?

0
106

ಚಿಕ್ಕಬಳ್ಳಾಪುರ/ಚಿಂತಾಮಣಿ:- ನಗರದ ನಗರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿಗಾಗಿ ಜಟಾಪಟಿ.ಆಯುಕ್ತರ ವಿರುದ್ಧ ಅಸಮಾಧಾನ ಗೊಂಡು ಪ್ರತಿ ಹರಿದು ಹಾಕಿದ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್.

ಕುಡಿಯುವ ನೀರಿನ ಸಮಸ್ಯೆ ಚರ್ಚೆ ವಿಷಯವಾಗಿ ನಗರಸಭೆ ಸದಸ್ಯ ಮತ್ತು ಪೌರಾಯುಕ್ತ ನಡುವೆ ಜಟಾಪಟಿ ಏರ್ಪಟ್ಟು ಚರ್ಚೆಗೆ ಸಭೆಯ ಆರಂಭದಲ್ಲಿ ಅವಕಾಶ ನೀಡದಿರುವುದನ್ನು ವಿರೋಧಿಸಿ17 ನೇ ವಾರ್ಡಿನ ಸದಸ್ಯರು ಅಜೆಂಡಾ ಪ್ರತಿ ಹರಿದು ಹಾಕಿದ ಘಟನೆ ನಡೆಯಿತು.ನಗರಸಭೆಯ ಅಧ್ಯಕ್ಷೆ ಸುಜಾತಶಿವಣ್ಣರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜೆಂಡಾ ರೀತಿ ವಿಷಯಗಳನ್ನು ಓದಲು ಪ್ರಾರಂಭ ಮಾಡುತ್ತಿದ್ದಂತೆ 17 ನೇ ವಾರ್ಡಿನ ಚೌಡರೆಡ್ಡಿ ಪಾಳ್ಯದ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಕುಡಿಯುವ ನೀರು ಸರಬರಾಜು ಮಾಡುವ ವಿಚಾರದ ಬಗ್ಗೆ ಚರ್ಚೆ ಮಾಡುವಂತೆ ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಯುಕ್ತ ಪ್ರಸದ್ ರವರು ಕುಡಿಯುವ ನೀರು ಸಮರ್ಪಕ ವಿತರಣೆಗೆ ಸಂಬಂಧಪಟ್ಟಂತೆ ತಾವು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚೆ ಮಾಡಿದ್ದೇನೆ. ಸಮಸ್ಯೆ ನೀಗಿಸಲು ಕೆಲ ದಿನಗಳ ಕಾಲಾವಕಾಶ ಕೊಡುವಂತೆ ಕೋರಿದರು.ಮಧ್ಯೆ ಪ್ರವೇಶಿಸಿದ ಸದಸ್ಯ ಶಫೀಕ್ ಬಂದ ಪೌರಯುಕ್ತರೆಲ್ಲಾ ಇದೇ ಮಾತು ಹೇಳಿದ್ದಾರೆ. ಕುಡಿಯುವ ನೀರು ವಿಷಯ ಬಂದಾಗ ಸಮಗ್ರವಾಗಿ ಚರ್ಚೆ ಮಾಡೋಣ ಅದಕ್ಕೂ ಮುನ್ನ ಅಜೆಂಡಾದಲ್ಲಿರುವ ಒಂದೊಂದು ವಿಷಯ ಚರ್ಚೆಯಾಗಲಿ ಎಂದರು.ಈ ಸಂದರ್ಭದಲ್ಲಿ ಮಹಮ್ಮದ್ ಶಫೀಕ್ ಮತ್ತು ಪೌರಯುಕ್ತರ ನಡುವೆ ಮಾತಿನ ಚಕಮುಕಿ ನಡೆದಾಗ ಪೌರಯುಕ್ತರು ಅಜೆಂಡಾ ರೀತಿ ವಿಷಯ ಪ್ರಸ್ತಾಪಿಸಲು ಮುಂದಾದಾಗ ಆಡಳಿತಾರೂಢ ಪಕ್ಷದ ಸದಸ್ಯರಾದ ಮಹಮ್ಮದ್ ಶಫೀಕ್ ರವರು ಅಸಭ್ಯವಾಗಿ ವರ್ತಿಸಿ ಅಜೆಂಡಾ ಪ್ರತಿಯನ್ನು ಸಭೆಯಲ್ಲಿ ಹರಿದು ಹಾಕಿದಾಗ ಪೌರಾಯುಕ್ತರು ಅಸಭ್ಯವಾಗಿ ಸಭೆಯಲ್ಲಿ ವರ್ತನೆ ಮಾಡುವುವರರನ್ನು ಸಭೆಯಿಂದ ಹೊರಕ್ಕೆ ಕಳುಹಿಸಿ ಬಾಗಿಲು ಹಾಕುವಂತೆ ಸೂಚಿಸುತ್ತಿದ್ದಂತೆ ಮಹಮ್ಮದ್ ಶಫೀಕ್ ಸಭೆಯನ್ನು ಬಹಿಷ್ಕಾರಿಸಿ ಸಭೆಯಿಂದ ಹೊರ ಹೋದ ಘಟನೆ ನಡೆಯಿತು.

LEAVE A REPLY

Please enter your comment!
Please enter your name here