ಸಾರ್ವಜನಿಕರ ಕಂದುಕೊರತೆಗಳ ಸಭೆ

0
141

ಮಂಡ್ಯ/ಮಳವಳ್ಳಿ: ಪಟ್ಟಣದ ಸಾರ್ವಜನಿಕ ರ ಕಂದುಕೊರತೆ ಸಭೆ ಪುರಸಭಾಧ್ಯಕ್ಷ ರಿಯಾಜಿನ್ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ಸಭಾಂಗಣ ದಲ್ಲಿ ನಡೆಸಲಾಯಿತು.
ಸಾರ್ವಜನಿಕ ರು‌ ಪಟ್ಟಣದ ಸಾಕಷ್ಟು ಸಮಸ್ಯೆ ಗಳಿದ್ದು ಸಾರ್ವಜನಿಕ ಶೌಚಾಲಯ ವಿಲ್ಲದೆ ಇರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದಲ್ಲದೆ ಸಂತೆ ವ್ಯವಸ್ಥೆ ಸರಿಪಡಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು,ಚರಂಡಿಗಳ ಪೂರ್ಣವಾಗದೆ ಕೆರೆಗಳಿಗೆ ಹೋಗುತ್ತಿದೆ ಎಂದು ಆರೋಪಿಸಿದರು. ಖಾಸಗಿ ಬಸ್ ನಿಲ್ದಾಣ ವಿಲ್ಲ. ಇದಲ್ಲದೆ ಟ್ರಾಫಿಕ್ ಸಾಕಷ್ಟು ಜನರು ಮಕ್ಕಳ ರಸ್ತೆ ದಾಟಲು ಪರದಾಡುತ್ತಿದ್ದಾರೆ. ಸಿಗ್ನಲ್ ಸಹ ಕೆಟ್ಟು ಹೋಗಿ ವರ್ಷಗಳೇ ಕಳೆದರೂ ರೀಪೇರಿ ಯಾಗಿಲ್ಲ‌ ಎಂದು ಆರೋಪಿಸಿದರು. ಕುಡಿಯುವ ನೀರು ಸಮಸ್ಯೆಯ ಬಗ್ಗೆ ಪ್ರತಿ ವಾರ್ಡನಲ್ಲಿಯೂ ಇದೆ ಸಾರ್ವಜನಿಕರು ಸಮಸ್ಯೆಗಳ ಸರಮಾಲೆ ಯನ್ನೇ ಸುರಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಮಂಜು ನಾಥ, ಉಪಾಧ್ಯಕ್ಷ ಸುಮನಾಗೇಶ್, ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಸಾರ್ವಜನಿಕರುಇದ್ದರು

LEAVE A REPLY

Please enter your comment!
Please enter your name here