ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

0
118

ಚಿಕ್ಕಬಳ್ಳಾಪುರ/ಗುಡಿಬಂಡೆ : ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆಂಬ ಕಾರಣದಿಂದ ಮನನೊಂದರೈತನೋರ್ವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕೊಂಡವಾಬನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ತಾಲ್ಲೂಕಿನ ಕೊಂಡವಾಬನಹಳ್ಳಿ  ಗ್ರಾಮದ ಆದಿನಾರಾಯಣಪ್ಪ(೫೨) ಮೃತ ರೈತನಾಗಿದ್ದು, ಗುರುವಾರ ಸಂಜೆ ಎಂದಿನಂತೆ ಮನೆಗೆ ಬಂದು ಊಟ ಮಾಡಿ ಮನೆಯ  ಮುಂದೆಮಲಗಿದ್ದಾನೆ. ಸುಮಾರು ೧೧ ಗಂಟೆ ಸಮಯದಲ್ಲಿ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಕಂಡುಕುಟುಂಬಸ್ಥರು ಗಾಬರಿಗೊಂಡು ವಿಚಾರಿಸಿದಾಗ  ಕ್ರಿಮಿನಾಶಕ ಸೇವಿಸಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಆಟೋದಲ್ಲಿ ಗುಡಿಬಂಡೆ ಸಾರ್ವಜನಿಕ  ಆಸ್ಪತ್ರೆಗೆ ಕರೆತರುವ ಮಾರ್ಗಮದ್ಯದಲ್ಲೇಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ರೈತ ಕೊಂಡವಾಬನಹಳ್ಳಿ ೧.೨೩ ಗುಂಟೆ  ಜಮೀನಿನಲ್ಲಿ ಎರಡು ಕೊಳವೆಬಾವಿಗಳನ್ನು ಕೊರೆಸಿರುವ ಮೃತ ರೈತ ಆದಿನಾರಾಯಣಪ್ಪ  ಬೀಚಗಾನಹಳ್ಳಿ ಕೆನರಾ ಬ್ಯಾಂಕ್ನಲ್ಲಿ ರೂ.೧ ಲಕ್ಷ, ತನ್ನ ಮಗ ಆನಂದ್‌ನ ಹೆಸರಿನಲ್ಲಿ ರೂ.೧.೬೫ ಲಕ್ಷ  ಚಿನ್ನದ ಸಾಲ, ಬಾಗೇಪಲ್ಲಿ ಕಾರ್ಪೊರೇಷನ್ ಬ್ಯಾಂಕಿನಲ್ಲಿ ರೂ.೨೫ ಸಾವಿರ ಹಾಗೂ ರೂ ೮ ಲಕ್ಷ  ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಆಲೂಗಡ್ಡೆ
ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸಾಲ ತೀರಿಸಬಹುದೆಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಲೆ ಸಿಗದಿದ್ದ ರಿಂದ ಆತಂಕಗೊಂಡಿದ್ದ ಅಲ್ಲದೆ ಈಗ ಟಮೋಟ ಹಾಗೂ ಎಲೆ ಕೋಸು ಬೆಳೆ ಬೇಸಿಗೆಗೆ ಸರಿಯಾಗಿ ಬೆಳೆ ಬರದಿರುವುದರಿಂದ ಸಾಲ ಹೇಗೆ
ತೀರಿಸಬೇಕೆಂದು ತೋಚದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ವಿಷಳಸ್ಥಳಕ್ಕೆ ತಹಸೀಲ್ದಾರ್ ನಂಜಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಜೆ.ಗೌತಮ್, ಸಬ್ಇನ್ಸ್ ಪೆಕ್ಟರ್ ಪಾಪಣ್ಣ, ಕೃಷಿ ಇಲಾಖಾ ಮತ್ತು  ಕಂದಾಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈಬಗ್ಗೆ ಗುಡಿಬಂಡೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here