ಸಾಲಬಾಧೆ ರೈತ ನೇಣಿಗೆ ಶರಣು

0
240

ಮಂಡ್ಯ/ಮಳವಳ್ಳಿ: ಸಾಲಭಾದೆ ತಾಳಲಾರದೆ ರೈತನೊಬ್ಬ ಡೆತ್ ನೋಟ್ ಬರೆದು  ನೇಣಿಗೆ ಶರಣಾದ ಘಟನೆ ಮಳವಳ್ಳಿ ತಾಲ್ಲೂಕಿನ ಗುಳಗಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆ‌ .ನಿಂಗೇಗೌಡ ಪುತ್ರ ನಾಗರಾಜು(48) ಮೃತ ಪಟ್ಟ ರೈತನಾಗಿದ್ದು. ಈತನ ಹೆಸರಿನಲ್ಲಿ ಎರಡೂವರೆ ಎಕರೆ ಜಮೀನಿದ್ದು. ಬೋರ್ ವೆಲ್ ಕೊರೆಸಿದ್ದು ನೀರು ಬಂದಿಲ್ಲ .ಹಾಗೂ  ಚೆಕ್ ನೀಡಿ  ಕೈಸಾಲ ಸುಮಾರು 3 ಲಕ್ಷ ಕ್ಕೂ ಹೆಚ್ಚು ಸಾಲ ಮಾಡಿದ್ದ ಎನ್ನಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ನಲ್ಲಿ ನನ್ನಸಾವಿಗೆ ಮಹದೇವ. ಹಾಗೂ ಪದ್ಮಮ್ಮ ಕಾರಣ . ಹಾಗೂ ತಾನು ಸಾಲ ಮಾಡಿರುವ ವಿವಿರವನ್ನು ಬರೆದಿಟ್ಟು ಸಾವನ್ನಪ್ಪಿದ್ದು. ಸ್ಥಳಕ್ಕೆ ಗ್ರಾಮಾಂತರ ಸಕ೯ಲ್ ಇನ್ಸ್ ಪೆಕ್ಟರ್ ಶ್ರೀಕಾಂತ್. ಕೃಷಿ ಅಧಿಕಾರಿ ಗಳು. ಕಂದಾಯ ಇಲಾಖೆ R I ಪ್ರಕಾಶ್ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here