ಸಾಲು, ಸಾಲು ರಜೆ- ಹಂಪಿಗೆ ಹರಿದು ಬಂದ ಜನಸಾಗರ

0
221

ಬಳ್ಳಾರಿ/ಹೊಸಪೇಟೆ:ಸಾಲು, ಸಾಲು ರಜೆ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಐತಿಹಾಸಿಕ ಹಂಪಿ ಕಡೆ ಮುಖ ಮಾಡಿದ್ದು, ಪ್ರಸಿದ್ಧ ಸ್ಮಾರಕಳನ್ನು ವೀಕ್ಷಣೆ ಮಾಡಿದರು.

ಸತತ ಮೂರು ದಿನಗಳ ಸರ್ಕಾರಿ ಕಚೇರಿಗಳಿಗೆ ರಜೆ ಬಂದಿರುವುದರಿಂದ ಪರಿವಾರ ಸಮೇತ ಪ್ರವಾಸಿಗರು, ತಂಡೋಪ ತಂಡವಾಗಿ ಹಂಪಿಗೆ ಬೇಟಿ ನೀಡಿ, ಪ್ರಸಿದ್ಧ ಸ್ಮಾರಕಳನ್ನು ವೀಕ್ಷಣೆ ಮಾಡಿ ಖುಷಿ ಅನುಭವಿಸಿದರು.
ಜೊತೆಗೆ ಶ್ರಾವಣಮಾಸ ಬೇರೆ ಇರುವುದರಿಂದ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದರ್ಶನ ಪಡೆದ ಪ್ರವಾಸಿಗರು, ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಸಂಭ್ರಮಿಸಿದರು.
ಕಳೆದ ನಾಲ್ಕು ದಿನಗಳಿಂದ ಹಂಪಿ ಪ್ರದೇಶದಲ್ಲಿ ಇರುವ ಮೋಡ ಕವಿದ ವಾತವರಣ, ಪ್ರವಾಸಿಗರಿಗೆ ತಂಪನೆಯ ಅನುಭೂತಿ ನೀಡಿದ್ದು, ಕೆಲವರು, ಸೈಕಲ್, ಮೋಟರ್ ಬೈಕ್, ಕಾರು ಸುತ್ತಾಡಿದರೆ, ಇನ್ನೂ ಕೆಲ ಜನರು, ಕಾಲ್ನಡಿಗೆಯಲ್ಲಿ ಹಂಪಿಯಲ್ಲಿ ವೀಕ್ಷಣೆ ಮಾಡಿದರು.
ಸಾಸವಿಕಾಳು, ಕಡಲೆಕಾಳು, ಬಡವಿಲಿಂಗ, ಉಗ್ರನರಸಿಂಹ, ಕಮಲಮಹಲ್, ರಾಣಿ ಸ್ಮಾನ ಗೃಹ, ವಿಜಯವಿಠಲ ದೇವಸ್ಥಾನ ಸೇರಿದಂತೆ ಇತರೆ ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿಗರು ಕಂಡು ಬಂದರು.
ವಿರೂಪಾಕ್ಷ ರಥ ಬೀದಿಯಲ್ಲಿ ಹೂ.ಹಣ್ಣು, ಕಾಯಿ ವ್ಯಾಪಾರ ಜೋರಾಗಿಯೇ ನಡೆದಿತ್ತು. ಹೋಟೆಲ್, ಲಾಡ್ಜ್ಗಳು ಎಲ್ಲ ಕಡೆ ಜನ ಸುಳಿದಾಡುವ ದೃಶ್ಯ ಸಾಮಾನ್ಯವಾಗಿತು. ಒಟ್ಟಾರೆ ಹಂಪಿಯಲ್ಲಿ ಪ್ರವಾಸಿಗರು ಕುಟುಂಬದ ಸದಸ್ಯರೊಟ್ಟಿಗೆ ರಜೆ ದಿನಗಳ ಮಜಾ ಅನುಭವಿಸಿದರು.
ಟಿ.ಬಿ.ಡ್ಯಾಂಗೂ ಬೇಟಿ:ಹಂಪಿ ಪ್ರವಾಸಕ್ಕೆ ಬಂದವರು ತುಂಗಭದ್ರಾ ಜಲಾಶಯಕ್ಕೆ ಬೇಟ ನೀಡದೇ ಹೋದರೆ ಪ್ರವಾಸಿ ಪೂರ್ಣಗೊಳ್ಳುವುದಿಲ್ಲ. ಹಂಪಿಗೆ ಬಂದ ಪ್ರತಿ ಪ್ರವಾಸಿಗರು, ಟಿ.ಬಿ.ಡ್ಯಾಂಗೆ ಬೇಟಿ ನೀಡಿ, ತುಂಗಭದ್ರಾ ಜಲಾಶಯವನ್ನು ವೀಕ್ಷಣೆ ಮಾಡುವುದು ವಾಡಿಕೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಜಲಾಶಯಕ್ಕೆ ಬೇಟಿ ನೀಡಿ ವೀಕ್ಷಣೆ ಮಾಡಿದರು. ಜಲಾಶಯದ ಕೆಳಭಾಗದ ಉದ್ಯಾವನದಲ್ಲಿರುವ ಸಂಗೀತ ಕಾರಂಜಿ, ಪಕ್ಕದ ಕೊಳದಲ್ಲಿ ಬೋಟಿಂಗ್ ಮಾಡಿದರು.

LEAVE A REPLY

Please enter your comment!
Please enter your name here