ಸಾಲ ಕಟ್ಟಿ ಅಂದ್ರೆ…..ಹೊಡಿತೇವಿ..!?

0
494

ಬಳ್ಳಾರಿ/ಬಳ್ಳಾರಿ:ಬ್ಯಾಂಕ್ ಅಧಿಕಾರಿಗಳ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ಕಿಡಿ. ರೈತರೇ ನಿಮ್ಮ ಸಾಲ ಕಟ್ಟಿ ಅಂತಾ ಬ್ಯಾಂಕ್ ಅಧಿಕಾರಿಗಳು ಹೇಳಿದ್ರೆ ಅವರನ್ನು ಮೆ….ನಿಂದ ಹೊಡೆಯಿರಿ. ನಿಮ್ಮ ಊರಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿಗೆ ಬಂದ್ರೆ ಅವರನ್ನು ಕಟ್ಟಿ ಹಾಕಿರೀ. ಹೀಗಂತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ  ಕೋಡಿಹಳ್ಳಿ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ,

ಬಳ್ಳಾರಿಯಲ್ಲಿಂದು ನಡೆದ ಸಾಲಗಾರ ನಾನಲ್ಲ, ಸಾಲ ನನ್ನದಲ್ಲ, ಸಾಲ ಮನ್ನಾಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರೈತರು ಸಾಲ ಮಾಡೋದು ಬೆಳೆ ಬೆಳೆಯೋಕೆ. ರೈತರು ಬೆಳೆದ ಬೆಳೆಯನ್ನೆ ರಾಜಕಾರಣಿಗಳು ಬ್ಯಾಂಕ್ ಅಧಿಕಾರಿಗಳು ಊಟ ಮಾಡೋದು. ಹೀಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು, ಅಲ್ಲದೇ ಸಾಲ ವಸೂಲಿಗೆ ಬಂದ್ರೆ ಹುಷಾರ ಅಂತಾ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ಹಾಕಬೇಕೆಂದು ಕರೆ ನೀಡಿದರು,

ಬೈಟ್: ಕೋಡಿಹಳ್ಳಿ ಚಂದ್ರಶೇಖರ್ (ರಾಜ್ಯಾಧ್ಯಕ್ಷರು. ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ)

LEAVE A REPLY

Please enter your comment!
Please enter your name here