ಸಿಎಂ ಸಮಾಜವಾದಿ ಅಲ್ಲಾ ಮಜವಾದಿ..?

0
103

ರಾಯಚೂರು: ಸಮಾಜವಾದಿಯಾಗಿದ್ದ ಸಿದ್ದರಾಮಯ್ಯ ಮಜಾವಾದಿಯಾಗಿದ್ದಾನೆ ಎಂದು  ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಜಿಲ್ಲೆಯ ದೇವದುರ್ಗ  ಮತ್ತು ರಾಯಚೂರುನಲ್ಲಿ ಆಯೋಜಿಸಿದ್ದ ಪರಿವರ್ತನೆ ಯಾತ್ರೆಯ ಕಾರ್ಯ ಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲಿಕ್ಕೆ ಕಾಂಗ್ರೆಸ್ ಸರಕಾರ ನೇರ ಕಾರಣ,ಬೆಂಗಳೂರು ಅತ್ಯಾಚಾರಕ್ಕೆ ನಂ೧ ಸ್ಥಾನದಲ್ಲಿದೆ.ರೈತರು ಆತ್ಮಹತ್ಯೆ ಹೆಚ್ಷಾಗಿದೆ.ಸಾಲಮನ್ನಾ ಮಾಡಿದೆವೆ ಎಂದು ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವುದು ಸಿದ್ದರಾಮಯ್ಯನ ಅವಲಕ್ಷಣವಾಗಿದೆ. ಕೊಲೆ ದೌರ್ಜನ್ಯ ರಾಜ್ಯದಲ್ಲಿ ಮಿತಿಮೀರಿದೆ ಎಂದರು.

ಮುಂಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ನ್ನು ನಿರ್ನಾಮ ಮಾಡು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಅಚ್ಚೆ ದಿನ್ ಬಂದಿದೆ ಎಂದು ಸಿದ್ದರಾಮಯ್ಯನಿಗೆ ತೊರಿಸಿಕೊಡುತ್ತೀವೆ ಎಂದರು.ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಕಾಂಗ್ರೆಸ್ ಸಾಧನಾ ಸಮಾವೇಶ ಮಾಡಲು ಹೊರಟಿದೆ.

ರಾಜ್ಯದ ಅಭಿವೃದ್ದಿಗೆ ಸಾಲಮಾಡಿದ್ದು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ರಾಜ್ಯದ ಜನರಿಗೆ ತೋರಿಸಬೇಕಾಗಿದೆ.ಎಷ್ಟು ಸಾಲ ಮಾಡಲಾಗಿದೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ಜನರು ಮುಂದೆ ಇಡಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಪ್ರಹ್ಲಾದ್ ಜೋಶಿ,ಸಂಸದ ಬಿ.ಶ್ರೀರಾಮುಲು, ಶಾಸಕ ಕೆ.ಶವನಗೌಡ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜುಗೌಡ,ಶಾಸಕ ಸಿ.ಟಿ.ರವಿ, ರಾಜುಗೌಡ, ಮಾಜಿ ಸಚಿವ ಗೋವಿಂದರಾಜ್ ಕಾರಜೋಳ, ಶಾಸಕ ತಿಪ್ಪರಾಜು, ಶರಣಪ್ಪ ಗೌಡ, ಬಸವನ ಗೌಡ,ಪಾಪರೆಡ್ಡಿ ಸೇರಿದಂತೆ ಅನೇಕ ಮುಖಂಡರು, ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಭಾಗವಹಿಸಿದರು

LEAVE A REPLY

Please enter your comment!
Please enter your name here