ಸಿಕ್ಕಿಬಿದ್ದ ಬ್ಯಾಟರಿ ಕಳ್ಳರು

0
150

ಮಂಡ್ಯ/ಮಳವಳ್ಳಿ: ಗೂಡ್ಸ್ ಆಟೋ ಮತ್ತು ಟ್ರ್ಯಾಕ್ಟರ್ ಬ್ಯಾಟರಿಯನ್ನು ಕಳವು ಮಾಡಿದ ನಾಲ್ವರ ಆರೋಪಿಯನ್ನು ಬಂದಿಸಿ ಸುಮಾರು 2.08 ಲಕ್ಷ ರೂ ಮೌಲ್ಯದ ಮಾಲುಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಪೊಲೀಸರು ಯಶ್ವಸಿಯಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದ ಮನು(20), ಸ್ವಾಮಿ(25), ರಮೇಶ(28) ಮಳವಳ್ಳಿ ತಾಲ್ಲೂಕಿನ ಜವನಗಳ್ಳಿ ಗ್ರಾಮ ಟ್ರ್ಯಾಕ್ಟರ್ ಚಾಲಕ ನವೀನ್(24) ಬಂಧಿತ ಆರೋಪಿಗಳು . ಜು. 9 ರಂದು ಮಳವಳ್ಳಿ ತಾಲ್ಲೂಕಿನ ಹುಲ್ಲಂಬಳ್ಳಿ ಗ್ರಾಮದ ನಾಗರಾಜು ಎಂಬುವರ ಟ್ರ್ಯಾಕ್ಟರ್ ನ 8 ಸಾವಿರ ರೂ ಮೌಲ್ಯದ ಬ್ಯಾಟರಿ ಕಳವು ಬಗ್ಗೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರದಾಖಲಾಗಿದ್ದು ಈ ತನಿಖೆಯನ್ನು ನಡೆಸಲಾಗಿ ಜು 6 ರಂದು ಟಿ.ನರಸೀಪುರ ತಾಲ್ಲೂಕಿನ ಚಿದರಹಳ್ಳಿ ಗ್ರಾಮದ ರಾಜು ಎಂಬುವವರ ಮಹೇಂದ್ರ ಗೂಡ್ಸ್ ಆಟೋ ದಲ್ಲಿದ್ದ 2ಲಕ್ಷ ರೂ ಬ್ಯಾಟರಿಯನ್ನು ಕಳವುವಿನ ಪ್ರಕರಣ ದಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಕಾರ್ಯಾಚರಣೆ ಯಲ್ಲಿ ಡಿವೈಎಸ್ ಪಿ ಮ್ಯಾಥಿವ್ ಥಾಮಸ್ ಮಾರ್ಗದರ್ಶನ ದಲ್ಲಿ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ಎಎಸ್ ಐ. ನಿಂಗಣ್ಣ,ಮರಿಸ್ವಾಮಿ, ಕ್ರೈಂ ವಿಭಾಗ ಸಿಬ್ಬಂದಿಗಳಾದ ಅಂಜನಮೂರ್ತಿ, ಚೌಡಶೆಟ್ಟಿ ಪ್ರಭುಸ್ವಾಮಿ,ಮೋಹನ್ ಕುಮಾರ್,ರಿಯಾಜ್ ಪಾಷ, ಮಹದೇವು, ಧನಂಜಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here