ಸಿಡಿಲು ಬಡಿದು ಇಬ್ಬರ ಸಾವು

0
191

ತುಮಕೂರು/ಗುಬ್ಬಿ: ತಾಲೂಕು ಕಸಬಾ ಹೋಬಳಿ ಮಲ್ಲಪ್ಪನಹಳ್ಳಿ ಗ್ರಾಮದ ನಾಲ್ಕು ಜನರಿಗೆ ಸಿಡಿಲು ಬಡಿದು ಇಬ್ಬರು ಸಾವು ಮಂಜುಳ(40), ಭಾರತಿ(13) ಶಿಲ್ಪ(16), ಸಂತೋಷ್(13) ಇಬ್ಬರ ಸ್ಥಿತಿ ಗಂಭೀರ. ಮಲ್ಲಪ್ಪನಹಳ್ಳಿ ನಿವಾಸಿಗಳಾದ ಇವರು ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮಂಜುಳಾ ಅವರನ್ನು ಕರೆತರಲು ಹೋಗಿದ್ದ ಮೈದನನ ಮಗಳು ಭಾರತಿ ಮತ್ತು ಮಕ್ಕಳಾದ ಸಂತೋಷ, ಶಿಲ್ಪ ಇವರುಗಳು ವಾಪಸ್ಸು ಮನೆಗೆ ಬರುವಾಗ ಸೋಮವಾರ ಸಂಜೆ 5.30 ರ ಸಮಯದಲ್ಲಿ ಮಳೆ ಬಂದ ಹಿನ್ನಲೆ ಪೆಮ್ಮನಹಳ್ಳಿ ಗೇಟ್ ಬಳಿಯ ಆಲದ ಮರದ ಆಶ್ರಯ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಸಿಡಿಲು ಬಡಿದು ಮಂಜುಳ, ಭಾರತಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಶಿಲ್ಪ ಮತ್ತು ಸಂತೋಷ್ ಅವರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here