ಸಿಪಿಐಎಂ ಕಚೇರಿ ಮೇಲೆ ದಾಳಿಯನ್ನು ಖಂಡಿಸಿ ಕಾರ್ಯಕರ್ತರು ಪ್ರತಿಭಟನೆ

0
200

ಬಿಜೆಪಿ ಹಾಗೂ ಆರ್‍ಎಸ್‍ಎಸ್‍ ನವರ ದೌರ್ಜನ್ಯ ಹಾಗೂ  ಸಿಪಿಐಎಂ ಕಚೇರಿ ಮೇಲೆ ದಾಳಿಯನ್ನು ಖಂಡಿಸಿ ಸಿಪಿಎಂ ಕಾರ್ಯಕರ್ತರು ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ /ಹೊಸಪೇಟೆ;ತಾಲೂಕು ಕಾಯದರ್ಶಿ ಭಾಸ್ಕರ್ ರೆಡ್ಡಿ ಜಿಲ್ಲಾ ಮಾತನಾಡಿ, ಸ್ವತಂತ್ರ ಪೂರ್ವದಿಂದಲು ಬಲ ಪಂಥೀಯರು ಹಿಂಸಾ ಮಾರ್ಗದಲ್ಲೆ ಬಂದಿದ್ದಾರೆ. ಹಾಗಾಗಿ ಶಾಂತಿಯುತವಾದ ರಾಷ್ಟ್ರ ನಿರ್ಮಾಣ ಅವರ ಉದೇಶವಾಗಿಲ್ಲ. ಅನ್ಯಾಯದ ವಿರುದ್ದ ಹೋರಾಡುವವರಿಗೆ ಬೆದರಿಕೆಗಳನ್ನು ಹಾಗೂ ಅವರ ಕಚೇರಿಗಳ ಮೇಲೆ ದಾಳಿ ನಡೆಸಿ ಹಿಂಸೆ ಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಿಂದ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಮಾತು ಗಳು ಕೇಳಿ ಬರುತ್ತಿದ್ದವು. ಆದರೆ ಸದಾ ಸಾಮಾನ್ಯ ಜನರಿ ನ್ಯಾಯಕ್ಕಾಗಿ ಹೋರಾಟ ನಡೆಸುವ ಸಿಪಿಎಂನ್ನು ಮುಕ್ತ ಮಾಡುವುದಾಗಿ ಹೇಳಿ ಕೊಳ್ಳುತ್ತಿದ್ದಾರೆ. ಸೈದ್ದಾಂತಿಕ ಹೋರಾಟದಿಂದ ಕೇಂದ್ರ ಸರ್ಕಾರದ ಇನ್ನೊಂದು ಮುಖವನ್ನು ಕಳಚುವಂತೆ ಮಾಡ್ತುತೇವೆ. ಕೇಂದ್ರ ಸರ್ಕಾರದ ಯೋಜನೆಗಳು  ಸಾರ್ವಜನಿಕ ಪರವಾಗಿಲ್ಲ. ಇದರಿಂದ ಸರ್ಕಾರಕ್ಕೆ ಬದ್ದತೆ ಇಲ್ಲದಾಗಿದೆ. ಅನ್ಯಾಯದ ವಿರುದ್ದ ಧ್ವನಿ ಎತ್ತುವವರನ್ನು ಹತ್ಯೆಗಳನ್ನು ಮಾಡಿಸುವ ಕೆಲಸಗಳನ್ನು ಮಾಡು ತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕಾರ್ಯಕಾರಿ ಮಂಡಳಿ ಸದಸ್ಯ ಮರಡಿ ಜಂಬಯ್ಯ ನಾಯಕ ಮಾತನಾಡಿದರು. ಕರುಣಾ ನಿಧಿ, ನಾಗರತ್ನಮ್ಮ, ಕಲ್ಯಾಣಯ್ಯ, ಕೆ.ರಮೇಶ್, ಎಸ್.ಸತ್ಯಮೂರ್ತಿ, ಎಂ.ಸಂತೋಷ್, ಎಂ.ಗೋಪಾಲ್, ವಿ.ಸ್ವಾಮಿ, ಯಲ್ಲಾಲಿಂಗ ಇತರಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿದಹನ ಮಾಡಿದರು.

LEAVE A REPLY

Please enter your comment!
Please enter your name here