ಸಿರಿಧಾನ್ಯ ಸಂಭ್ರಮ…

0
219

ಬೆಂಗಳೂರು/ಮಹದೇವಪುರ:- ಭಾರತದ ಪಾರಾಂಪರಿಕ ಆಹಾರವಾದ ಸಿರಿಧಾನ್ಯಗಳನ್ನು ಬಳಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಸ್ಪೈರಾಯಿಡ್ಸ್ ಸಂಶೋಧಕ ಡಾ.ಖಾದರ್ ತಿಳಿಸಿದರು. 

ಮಹದೇವಪುರ ಕ್ಷೇತ್ರದ ವೈಟ್ಫೀಲ್ಡ್ನ ಇನ್ನರ್ ಸರ್ಕಲ್ನಲ್ಲಿ ಕ್ಷೇತ್ರದ ಬಿಜೆಪಿ ಪಕ್ಷದವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಸಂಭ್ರಮ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿರಿಧಾನ್ಯವು ಪುರಾತನ ಭಾರತದ ಋಷಿಮುನಿಗಳು ಜನರಿಗೆ ಸೇವಿಸಲು ಸೂಚಿಸಿರುವ ಆಹಾರ ಪದಾರ್ಥಗಳು, ಆಧುನಿಕ ಆಹಾರೋತ್ಪನ್ನಗಳನ್ನು ವಿಚಿತ್ರ ಶೈಲಿಯಲ್ಲಿ ಮಾರುಕಟ್ಟೆಗೆ ದೂಡುತ್ತಿರುವ ಕಂಪೆನಿಗಳು ಭಾರತದ ಪಾರಂಪರಿಕ ಆಹಾರ ಪದ್ದತಿಯ ಧಾನ್ಯಗಳನ್ನು ಮೂಲೆಗುಂಪಾಗುವ ಷಡ್ಯಂತ್ರ ರಚಿಸಿವೆ, ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ವಿಷಯುಕ್ತ ಆಹಾರ ಇಂದಿನ ಆಧುಕಿನ ಆಹಾರದ ಗುಣವಾಗಿದೆ, ಪಾರಂಪರಿಕವಾಗಿ ಜನರು ರೂಡಿಯಲ್ಲಿರಿಸಿದ್ದ ಸಿರಿಧಾನ್ಯಗಳು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ, ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿದ್ದು, ರಕ್ತ ಶುದ್ಧಿ ಮಾಡುತ್ತದೆ, ಸಕ್ಕರೆ ಅಂಶವನ್ನು ರಕ್ತನಾಳಗಳಿಗೆ ನೇರವಾಗಿ ಸೇರಲು ಬಿಡದೆ ನಿಯಂತ್ರಣದಲ್ಲಿರಿಸುತ್ತದೆ, ರೈತ ಸ್ನೇಹಿಯೂ ಆದ ಈ ಧಾನ್ಯಗಳು ಕಡಿಮೆ ಪ್ರಮಾಣದ ತೇವ ಭೂಮಿಯಲ್ಲಿ ಬೆಳೆದು ಹೆಚ್ಚು ಲಾಭಗಳಿಸಲು ಅನುವಾಗಲಿದೆ, ಜನರು ತಮ್ಮ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಸುವುದು ಸೂಕ್ತ ಎಂದರು.

ಹಾರಕ, ನವಣೆ, ಊದಲು, ಕೊರಲೆ ಸೇರಿದಂತೆ ಇತರೆ ಸಿರಿಧಾನ್ಯಗಳು ನಮ್ಮ ಆಹಾರ ಪದ್ಧತಿಯ ಮೂಲ ಪದಾರ್ಥಗಳು, ಇಂದು ಜನರು ಎದುರಿಸುತ್ತಿರುವ ರಕ್ತದೊತ್ತಡ, ಊದುಕಾಯ, ಬೊಜ್ಜು, ಗ್ಯಾಂಗ್ರಿನ್, ಪೈಲ್ಸ್, ವಿವಿಧ ಕ್ಯಾನ್ಸ್ರ್ಗಳು, ಗಡ್ಡೆಗಳು, ಮರೆವಿನ ಕಾಯಿಲೆಗಳು ಸೇರಿದಂತೆ ಎಲ್ಲಾ ರೀತಿಯ ಮಾರಕ ರೋಗಗಳಿಗೆ ರಾಮಬಾಣವಾಗಿದೆ, ಆರೋಗ್ಯ ಕೆಟ್ಟರೆ ಜನರು ಆಸ್ಪತ್ರೆಗೆ ದೌಡಾಯಿಸುತ್ತಾರೆ, ಆದರೆ ಆಧುನಿಕ ಔಷದಿಗಳು ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ಉತ್ಪಾದಿಸಲ್ಪಟ್ಟವು ಖಾಯಿಲೆಯನ್ನು ಗುಣಪಡಿಸುವದಕ್ಕಿಂತ ಮತ್ತಷ್ಟು ಹೆಚ್ಚಾಗಿರುವ ಪ್ರಕರಣಗಳು ಕಂಡು ಬಂದಿವೆ, ಆಧುಕಿನ ಔಷದ ಮತ್ತು ಆಹಾರವನ್ನು ನಂಬಿಕೂರದೆ ಪಾರಂಪರಿಕ ಆಹಾರವನ್ನು ರೂಡಿಸಿಕೊಂಡು ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳುವಂತೆ ತಿಳಿಸಿದರು.
ಇದೆ ವೇಳೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ಭಾರತೀಯರು ಆಗಾದ ಜ್ಞಾನಿಗಳಾಗಿದ್ದು, ಆಹಾರ ಪದ್ದತಿಯಲ್ಲೇ ಔಷದತ್ವದ ಗುಣವನ್ನು ಕಂಡುಕೊಂಡು ಮುಂದಿನ ಪೀಳಿಗೆಗೆ ಸೂಚಿಸಿ ಹೊರಟರು, ಆದರೆ ನಾವು ಆಧುನಿಕ ಜೀವನ ಶೈಲಿಗೆ ಮಾರಹೋಗಿ ಕಂಡು ಕೇಳರಿಯದ ಕಾಯಿಲೆಗಳಿಗೆ ಗುರಿಯಾಗುತ್ತಿದ್ದೇವೆ, ಸಾರ್ವಜನಿಕರು ಪುರಾತನ ಆಹಾರ ಪದ್ದತಿಯನ್ನು ನಿತ್ಯದ ಆಹಾರದಲ್ಲಿ ರೂಡಿಸಿಕೊಂಡು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು ಎಂದರು. ರಾಜ್ಯ ಸರ್ಕಾರ ಪುರಾತನ ಆಹಾರ ಪದ್ದತಿಯ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಸಿರಿಧಾನ್ಯಗಳು ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವಂತೆ ಮಾಡಿ ರೈತರಿಗೆ ಮತ್ತು ಆಹಾರ ಸೇವಿಸುವ ನಾಗರಿಕರಿಗೂ ಹೆಚ್ಚು ಅನುಕೂಲವಾಗುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳು ಮತ್ತು ಆಯುರ್ವೇದ ಔಷದಿಗಳುಳ್ಳ ಸ್ಟಾಲ್ಗಳನ್ನು ಇರಿಸಲಾಗಿತ್ತು, ಸಾರ್ವಜನಿಕರು ಧಾನ್ಯಗಳನ್ನು ಖರೀದಿಸಿ ಕೊಂಡೊಯ್ದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಶ್ವೇತಾ ವಿಜಯ್ ಕುಮಾರ್, ಪುಷ್ಪಾ ಮಂಜುನಾಥ್, ಆಶಾ ಸುರೇಶ್, ಪುಷ್ಪಾ ಮಂಜುನಾಥ್, ಕ್ಷೇತ್ರಾಧ್ಯಕ್ಷ ರಾಜಾರೆಡ್ಡಿ, ವೆಂಕಟಸ್ವಾಮಿರೆಡ್ಡಿ,ಜಯಚಂದ್ರರೆಡ್ಡಿ, ಕಬಡ್ಡಿ ಪಿಳ್ಳಪ್ಪ, ಚನ್ನಸಂದ್ರ ಚಂದ್ರಶೇಖರ್,ಮಹೇಂದ್ರ, ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here