ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ

0
165

ಬಾಕಿ ಉಳಿದ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ತಾಕೀತು- ಡಿಸಿ

ರಾಯಚೂರು: ಸಿಸಿ ರಸ್ತೆಯ ಕಾಮಗಾರಿ ಗುಣಮಟ್ಟವನ್ನು ಜಿಲ್ಲಾಧಿಕಾರಿ ಬಗಾದಿ ಗೌತಮ್ ಪರಿಶೀಲನೆ ನಡೆಸಿದರು.

ಅವರಿಂದು ಬೆಳಿಗ್ಗೆ ನಗರದ ಜಾಕೀರ್ ಹುಸೇನ್ ವೃತ್ತದಿಂದ ಪ್ರಾರಂಭವಾದ ರಸ್ತೆ ಸುಪರ್ ಮಾರ್ಕೆಟ್ ವರೆಗೆ ನಿರ್ಮಾಣ ಮಾಡಿರುವ ಸಿಸಿ ರಸ್ತೆಯ ಗುಣಮಟ್ಟವನ್ನು ಪರಿಶಿಲಿಸಿದರು.

ನಗರದಲ್ಲಿನ ಉಳಿದ ಕಾಮಗಾರಿಗಳ ಕೆಲಸಗಳನ್ನು ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಬಂಗಿಕುಂಟ,ಮಾರುಕಟ್ಟೆ ಮುಂಭಾಗದ ಒಳ ಹೋಗುವ ರಸ್ತೆಯನ್ನು ಶೀಗ್ರಗತಿಯಲ್ಲಿ ಪೂರ್ಣಗೊಳಿಸಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
ನಗರದ ಉಳಿದ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂಧರ್ಭದಲ್ಲಿ ಶಿವರಾಜ್ ಪಾಟೀಲ್, ಮತ್ತು ನಗರಸಭೆಯ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here