ಸುಧಾರಿತ ಗಸ್ತು ವ್ಯವಸ್ಥೆ ಸಮುದಾಯದತ್ತ ಜನಸ್ನೇಹಿ ಪೊಲೀಸ್

0
214

ಚಾಮರಾಜನಗರ/ಕೊಳ್ಳೆಗಾಲ:ಸುಧಾರಿತ ಗಸ್ತು-ಬೀಟ್ ವ್ಯವಸ್ಥೆಯ ನ್ನು ಪೋಲೀಸ್ ಮತ್ತು ಸಮುದಾ ಯದ ನಡುವೆ ಉತ್ತಮ ಬಾಂಧವ್ಯ ವೃದ್ದಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ ಇದರಿಂದ ಜನಸ್ನೇಹಿ ಪೊಲೀಸ್ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇ೯ದ್ರ ಕುಮಾರ್ ಮೀನಾ ರವರುಹೇಳಿದರು.

ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಕೊಳ್ಳೇಗಾಲ ಉಪ ವಿಭಾಗ, ಕೊಳ್ಳೇಗಾಲ ಗ್ರಾಮಾಂತರ ಮತ್ತು ಪಟ್ಟಣ ಪೋಲೀಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ‘ ಸುಧಾರಿತ ಗಸ್ತು ವ್ಯವಸ್ಥೆಯ ನಾಗರೀಕ ಸದಸ್ಯರ ಸಭೆ ‘ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಹೊಸ ಬೀಟು ವ್ಯವಸ್ಥೆಯ ಉಪಯುಕ್ತತೆಯ ಕುರಿತು  ಮಾತನಾಡಿ ಅವರು ಪ್ರತಿಯೊಂದು ಗ್ರಾಮ, ಹೋಬಳಿ, ಬಡಾವಣೆಗಳಿಗೆ ನೇಮಕಗೊಂಡಿರುವ ಬೀಟು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಕುರಿತು ವಿವರಿಸಿ, ಬೀಟು ಅಧಿಕಾರಿಯು ಆಯಾ ಸರಹದ್ದಿನಲ್ಲಿರುವ ಜನಸಾಮಾನ್ಯರ ಎಲ್ಲಾ ರೀತಿಯ ಕಷ್ಟಸುಖಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕರೆ ನೀಡಿದರು.

ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜು  ಸೇರಿದಂತೆ  ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗುತ್ತದೆ, ಗಸ್ತಿನ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ತನಿಖೆ ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದು ಸುಧಾರಿತ ಗಸ್ತು ವ್ಯವಸ್ಥೆಯ ಉದ್ದೇ ಶವಾಗಿದೆ ಎಂದರು.

ಪ್ರತಿ ಬೀಟ್ನಲ್ಲಿರುವ ಸಾರ್ವ ಜನಿಕರು ಮತ್ತು ಪೊಲೀಸ್ ಠಾಣೆಯ ನಡುವೆ ಬೀಟ್ಗೆ ನೇಮಕಗೊಂಡ ಸಿಬ್ಬಂದಿ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು, ಇದರಿಂದ ಪೊಲೀಸ್ ಮತ್ತು ಸಮುದಾಯದ ನಡುವೆ ಬಾಂಧವ್ಯ ವೃದ್ದಿಸಿಕೊಳ್ಳುವದರ ಜೊತೆಗೆ ಬೀಟ್ನಲ್ಲಿರುವ ಸಮಸ್ಯೆಗಳು,ವಿವಾದಗಳು, ವಿದ್ಯಮಾನಗಳು,ಘಟನೆಗಳ ಬಗ್ಗೆ ಪೊಲೀಸ್ ಠಾಣೆಗೆ ಶೀಘ್ರ ಮಾಹಿತಿ ರವಾನೆಯಾಗಿ ಅತ್ಯಂತ ಕ್ಷಿಪ್ರಗತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಹಾಗೂ ನಿವಾರಣಾ ಕ್ರಮಗಳನ್ನು ಕೈಗೊಳ್ಳ ಬಹುದು,ಸಾರ್ವಜನಿಕರು ಪೊಲೀಸರ ನಡುವೆ ವಿಶ್ವಾಸಾರ್ಹತೆ ಬಲಗೊಳ್ಳುವ ರೀತಿಯಲ್ಲಿ ಬೀಟ್ ಪೇದೆ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಬೇಕಾಗಿದೆ ಎಂದು ತಿಳಿ ಸಿದರು.

ತಳಹಂತದ ಸಿಬ್ಬಂದಿಗಳ ಬಗ್ಗೆ ಗೌರವ ಹೆಚ್ಚಿಸುವಂತೆ ಸುಧಾರಿತ ಬೀಟ್ ವ್ಯವಸ್ಥೆ ರೂಪಿಸಲಾಗಿದೆ, ಇದನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸಮುದಾಯದತ್ತ ಪೊಲೀಸ್ ಎಂಬ ಪರಿಕಲ್ಪನೆಯು ವಿಸ್ತಾರವಾಗುವಂತೆ ನೋಡಿಕೊಳ್ಳ ಬೇಕು, ಸಮುದಾಯಕ್ಕೆ ಪ್ರತಿ ಬೀಟ್ ಒಂದು ಸಂಪರ್ಕ ಬಿಂದು ವಿನಂತೆ ಕಾರ್ಯನಿರ್ವಹಿಸುವ ಮೂಲಕ ಸಮುದಾಯದೊಡನೆ ಪೊಲೀಸ್ ಸಂಪರ್ಕದಲ್ಲಿ ಸಕಾರಾತ್ಮಕ ಬೆಳವಣಿಗೆ ಯಾಗುವಂತೆ ಈ ಗಸ್ತಿನ ಸಿಬ್ಬಂದಿ ನೋಡಿಕೊಳ್ಳಬೇಕು ಎಂದು ತಿಳಿಸಿದರದರು.

ಹೊಸ ಮಾದರಿ ಗಸ್ತು ವ್ಯವಸ್ಥೆಯ ಕುರಿತು ಸದಸ್ಯರುಗಳು ತಮ್ಮ ಅಭಿಪ್ರಾಯಗಳನ್ನು ಮಂಡನೆ ಮಾಡಿದರು.

ರೌಡಿಜಂ  ಮಾಡುವವರ ವಿರುದ್ದ ಮಾಹಿತಿ ನೀಡಿದರೆ ಇಲಾಖೆ ಕ್ರಮಕೈಗೊಳ್ಳಲಿದೆ. ಅದೇ ರೀತಿಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಇಲಾಖೆಯ ಅಧಿಕಾರಿಗಳ  ಸಂಪಕ೯ ಸಾಧಿಸಿ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿದರೂ ಸಹಾ  ನನಗೆ ದೂರು ಇಲ್ಲವೇ ಸಂದೇಶ ಕಳುಹಿಸಿದರೆ ಕ್ರಮಕೈಗೊಳ್ಳುತ್ತೆನೆ ಎಂದು ಎಸ್ಪಿ ತಿಳಿಸಿದರು.

ಹಿರಿಯರಾದ ರಾಮನಾಯಕ್ ಎಂಬ ಹಿರಿಯ ನಾಗರೀಕರು ಮಾತನಾಡಿ, ಕೈಗಾರಿಕ ಬಡಾವಣೆಯಲ್ಲಿ

ಮದ್ಯದಂಗಡಿ ಪಕ್ಕದಲ್ಲೆ ವಾಸಿಸುವ ಮನೆಗಳಿವೆ, ಕೆಳಭಾಗದಲ್ಲಿ ದೇವಸ್ಥಾನ, ಪಕ್ಕದಲ್ಲಿ ವಿದ್ಯಾಥಿ೯ ನಿಲಯ, ನೂರು ಮೀಟರ್ ದೂರದಲ್ಲಿ ಬಿಎಂ ಎಚ್ ಪಿ ಶಾಲೆ,

ಅದೇ ರಸ್ತೆಯಲ್ಲಿ ಕಾಲೇಜು ಇದೆ. ಅಂಗಡಿ  ಪ್ರಾರಂಭವಾದಾಗಿನಿಂದ ನಾವು ಬಹಳ ಕಿರಿಕಿರಿ ನೋವು ಅನುಭವಿಸುತ್ತಿದ್ದೆವೆ.ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದೆ ಸ್ವಾಮಿ ದಯಮಾಡಿ ಅದನ್ನು ಮುಚ್ಚಿಸಿ ಎಂದುತುಂಬಿದ ಸಭೆಯಲ್ಲಿ ಕೈ ಮುಗಿದ  ಮನವಿ ಮಾಡಿಕೊಂಡರು.

ಡಿವೈಎಸ್ಪಿ ಮಾದಪ್ಪ, ಪಿಎಸೈ ಅಮರನಾರಾಯಣ, ಮನೋರಕ್ಕಿತ ಬಂತೇಜಿ, ನಗರಸಭಾಧ್ಯಕ್ಷ ಶಾಂತರಾಜು, ನಾಗರೀಕ ಹಿತರಕ್ಷಣಾ ಸಮಿತಿಯ ಎಂ. ನಟರಾಜಮಾಳಿಗೆ ,  ನಗರಸಭೆ ಸದಸ್ಯರಾದ ಪಿ.ಎಂ. ಕೖಷ್ಣಯ್ಯ, ಹಾಲು ಮತ ಮಹಾಸಭಾ ಸಂಚಾಲಕ ವೆಂಕಟೇಶಮೂತಿ೯, ಮಹೇಶ್, ಸ್ವಾಮಿ , ಬಸವರಾಜು, ಚಿಲಕವಾಡಿ ಷಣ್ಮುಖಸ್ವಾಮಿ , ಮುಳ್ಳೂರು ಪ್ರಸನ್ನಮೂತಿ೯, ಧನೆಗರೆ ಸುವಣ೯ , ರಂಗಸ್ವಾಮಿ    ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here