ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ..

0
221

ಬಳ್ಳಾರಿ,/ಬಳ್ಳಾರಿ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಯುವಸಮೂಹದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಶಿಕ್ಷಕ ಸಮುದಾಯದ ಪಾತ್ರ ಅಪಾರವಾಗಿದೆ ಎಂದು ಕಾರ್ಮಿಕ, ಕೌಶಲ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸಂತೋಷ ಲಾಡ್ ಹೇಳಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 129ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ,
ಜಿಪಂ,ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಪಾರ್ವತಿನಗರದ
ಬಡಾವಣೆಯಲ್ಲಿರುವ ಬಸವಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ
ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ
ಅವರು ಮಾತನಾಡಿದರು.
ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಯುವಸಮೂಹದ ಶೇ.54ರಷ್ಟಿದೆ.
ಈ ಅತ್ಯಮೂಲ್ಯ ಮಾನವ ಸಂಪನ್ಮೂಲ ದೇಶಕ್ಕೆ ಹೊರೆಯಾಗದಂತೆ ಮತ್ತು ಸುಭದ್ರ ರಾಷ್ಟ್ರ
ನಿರ್ಮಿಸಲು ಅನುಕೂಲವಾಗುವಂತೆ ಅವರನ್ನು ಸಿದ್ದಪಡಿಸುವ ಹೊಣೆಗಾರಿಕೆ ನಮ್ಮ ಶಿಕ್ಷಕರ
ಸಮುದಾಯದ ಮೇಲಿದೆ ಎಂದು ಹೇಳಿದ ಸಚಿವ ಸಂತೋಷ ಲಾಡ್ ಅವರು,
ಶಿಕ್ಷಕರ ಬೇಡಿಕೆಗಳು ತಮ್ಮ ಗಮನದಲ್ಲಿದ್ದು, ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ
ಆದಷ್ಟು ಶೀಘ್ರ ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ಹೇಳಿದರು.
ನಮ್ಮ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುವುದರ ಮೂಲಕ ವಿಶೇಷ ಒತ್ತನ್ನು
ನೀಡುತ್ತಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ಲಾಡ್ ಅವರು,
ಜಿಲ್ಲಾಡಳಿತ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು
ವಿವರಿಸಿದರು.
ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ
ಎನ್.ವೈ.ಗೋಪಾಲಕೃಷ್ಣ ಅವರು ಬಳ್ಳಾರಿಯಲ್ಲಿ ಗುರುಭವನ ನಿರ್ಮಾಣಕ್ಕೆ ಶಾಸಕರ ನಿಧಿ ಅಡಿ
10 ಲಕ್ಷ ರೂ. ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಡಿಸಿ ರಾಮ್ ಪ್ರಸಾತ್
ಮನೋಹರ್ ಮಾತನಾಡಿದರು.
ಕರ್ನಾಟಕ ರಾಜ್ಯ ಕುರಿತು ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ಮೇಯರ್
ಜಿ.ವೆಂಕಟರಮಣ, ಡಿಡಿಪಿಐ ಶ್ರೀಧರನ್, ಡಯಟ್ ಉಪನಿರ್ದೇಶಕ ರಾಯಪ್ಪರೆಡ್ಡಿ, ಗಣ್ಯರಾದ
ಎಂ.ಅರುಣಪ್ರತಾಪ್‍ರೆಡ್ಡಿ, ಡಾ.ಎಂ.ಟಿ.ಮಲ್ಲೇಶ, ಸಿ.ನಿಂಗಪ್ಪ, ಡಾ.ಕೆ.ಹನುಮಂತಪ್ಪ,
ಆನಂದನಾಯ್ಕ, ಎಚ್.ಗುರಪ್ಪ, ಎ.ಕೆ.ರಾಮಣ್ಣ, ಡಾ.ವಿ.ಟಿ.ದಕ್ಷಿಣಮೂರ್ತಿ,
ಎಂ.ಕುಮಾರಸ್ವಾಮಿ, ಲಾಲ್ಯಾನಾಯಕ್, ಗುಂಡಪ್ಪನವರ್ ನಾಗರಾಜ, ಎಸ್.ಫರ್ವೆಜ್
ಅಹ್ಮದ್, ಮರಿಸ್ವಾಮಿರೆಡ್ಡಿ,ಎರ್ರಿಸ್ವಾಮಿ, ಕೆ.ಮಂಜುನಾಥ, ತಿಪ್ಪಾರೆಡ್ಡಿ, ಕೆ.ಲೋಕರಾಜ,
ಸಿ.ಪರಮೇಶ್ವರ, ಎಂ.ಬಿ.ಶಿವಣ್ಣ, ಅಸಂಗಿ ನಾಗರಾಜ, ಬಿ.ಎಸ್.ನಾಗರಾಜ, ಕೆ.ದಾದ
ಖಲಂದರ್, ಎನ್.ಲೋಕರೆಡ್ಡಿ ಮತ್ತಿತರರು ಇದ್ದರು.
ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಜಾರಿಗೆ ತರಲಾದ ಗುರುಚೇತನ ಯೋಜನೆಯನ್ನು ಇದೇ
ಸಂದರ್ಭದಲ್ಲಿ ಚಾಲನೆ ನೀಡಲಾಯಿತು. 16ಜನ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ
ಪ್ರಶಸ್ತಿ ಪ್ರದಾನ ಮಾಡಲಾಯಿತು.
2017-18ನೇ ಸಾಲಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಆಯ್ಕೆ ಪಟ್ಟಿ ವಿವರ
ಪ್ರಾಥಮಿಕ ವಿಭಾಗ: ಮಲ್ಲಯ್ಯ(ಸ.ಹಿ.ಪ್ರಾ.ಶಾಲೆ ಇಬ್ರಾಹಿಂಪುರ),ಕೆ.ತಿಪ್ಪೆಸ್ವಾಮಿ(ಸ.ಕಿ.ಪ್ರಾ.ಶಾಲೆ
ಡಿಸಿ ಕಾಲೋನಿ ಬಳ್ಳಾರಿ ಪೂರ್ವ ವಲಯ), ಜಯಪ್ಪ ಕಲ್ಲೂತಿ(ಸ.ಹಿ.ಪ್ರಾ.ಶಾಲೆ ಕೊಳಗಲ್ಲು),
ಕೊಟ್ಟುರೇಶ.ಕೆ(ಸ.ಹಿ.ಪ್ರಾ.ಶಾಲೆ ಬೊಮ್ಮಲಗುಂಡ),ಪುಟ್ಟಪ್ಪ ಬಿ.ಕೊಡಬಾಳ(ಸ.ಕಿ.ಪ್ರಾ.ಶಾಲೆ
ನಂದಿಗಾವಿ), ಕುಮಾರಸ್ವಾಮಿ(ಸ.ಉರ್ದು ಹಿ.ಪ್ರಾ.ಶಾಲೆ ಟಿಬಿ ಡ್ಯಾಂ ಹೊಸಪೇಟೆ),
ಎಚ್.ಎಂ.ಯೋಗೀಶ(ಸ.ಹಿ.ಪ್ರಾ.ಶಾಲೆ ಅಲಬೂರ್), ಇ.ಶಿವಶರಣಪ್ಪ((ಸ.ಹಿ.ಪ್ರಾ.ಶಾಲೆ
ಚೌಡಾಪುರ).
ಪ್ರೌಢಶಾಲಾ ವಿಭಾಗ: ಸಂಗಯ್ಯ ಮಲ್ಲಯ್ಯ ಹಿರೇಮಠ(ಸ.ಪ್ರೌ ಶಾ. ಹೊಸ ಯರಗುಡಿ),
ಎಚ್.ಎನ್.ಭೋಸಲೆ(ಬಾಲಕಿಯರ ಸ.ಪ.ಪೂ.ಕಾಲೇಜು(ಪ್ರೌಢಶಾಲೆ) ಸಂಡೂರು),
ಎಸ್.ಪರಶುರಾಮಪ್ಪ(ಸರ್ದಾರ್ ಪಟೇಲ್ ಸ್ಮಾರಕ ಸ.ಪ್ರೌ.ಶಾಲೆ
ಹೊಸಪೇಟೆ),ಸಿದ್ಯಾರಾಧ್ಯ(ಸ.ಪ್ರೌ.ಶಾ ಪೂಜಾರಹಳ್ಳಿ), ಗೌರಮ್ಮ(ಎಸ್.ಎನ್.ಎಂ.ಜೆ.ಎಸ್.
ಪ್ರೌಢಶಾಲೆ ಹನಸಿ), ಸುರೇಶ ಕಂದಗಲ್(ಸ.ಪ್ರೌ.ಶಾಲೆ(ಬಾ)ಸಿರಗುಪ್ಪಾ),
ಶಶಿಕಲಾ(ಸ.ಪ.ಪೂ.ಕಾಲೇಜು(ಪ್ರೌಢಶಾಲಾ ವಿಭಾಗ) ಕುರುಗೋಡು),
ಎಚ್.ಎಂ.ದೊಡ್ಡಬಸಯ್ಯ(ನಾಗಯ್ಯಚೌಧರಿ ಪ್ರೌಢಶಾಲೆ ನಲ್ಲಚೆರವು ಬಳ್ಳಾರಿ).
ಶಿಕ್ಷಕ/ಶಿಕ್ಷಕಿರಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here