ಸೂರಿಗಾಗಿ ಹೋರಾಟ…

0
87

ಬೆಂಗಳೂರು/ಕೆ ಆರ್ ಪುರ:  ತಾಲೂಕು ಕಛೇರಿಗಳಲ್ಲಿ ಅಧಿಕಾರಿಗಳು ಹಾಜರಾಗದೆ ಸಾರ್ವಜನಿಕರಿಗೆ ಕಿರಿ ಕಿರಿಉಂಟುಮಾಡುವುದಲ್ಲದೆ ತಹಶೀಲ್ದಾರ್ ನಮ್ಮ ಮನವಿಗೆ ಸಹಕರಿಸಿದರೂ ಸರ್ವೇ ಇಲಾಖಾ ಅಧಿಕಾರಿಗಳು ಲಂಚದ ಪೈಪೋಟಿ ನಡೆಸುತ್ತಾ ಬಡವರ ಬದುಕಿನಲ್ಲಿ ಆಟವಾಡ್ತುದ್ದಾರೆ ಎಂದು ಆಪಾದಿಸಿ ಕರ್ನಾಟಕ ರಿಪಬ್ಲಿಕನ್ ಸೇನಾ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ತಮ್ಮ ಆಕ್ರೋಶವನ್ನು ವ್ಯೆಕ್ತಪಡಿಸಿದರು.

ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ರವರಿಗೆ ನೆತ್ತಿಗೊಂದು ಸೂರು ನೀಡುವಂತೆ ಮರು ಮನವಿ ಸಲ್ಲಿಸಿ ಅವರು ಮಾತನಾಡಿದರು.

ಆವಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಛೀಮ ಸಂದ್ರ ಗ್ರಾಮದ ಸರ್ವೇ ನಂ. 77 ರಲ್ಲಿ ವಸತಿಹೀನರಿಗೆ ವಸತಿ ನೀಡಲು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಈ ಬಗ್ಗೆ ತಹಶೀಲ್ದಾರ್ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೂ ಭೂಮಾಪನ ಇಲಾಖಾ ಅಧಿಕಾರಿಗಳು ಕಡೆತಗಳನ್ನು ವಿಲೆ ಇಟ್ಟಿದ್ದಾರೆ ಎಂದು ದೂರಿದರು. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಭೂಮಾಪಕರು ಲಂಚದ ಪೈಪೋಟಿ ನಡೆಸುತ್ತಿದ್ದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ಮಹದೇವಪುರ ವಿಧಾನ ಸಭಾ ಕ್ಷೇತ್ರದ ಛೀಮಸಂದ್ರ ಗ್ರಾಮದ ಸರ್ವೇ ನಂ.77 ರಲ್ಲಿ 156 ಎಕರೆ ಸಕರ್ಾರಿ ಜಮೀನು ಇದ್ದು ಅದರಲ್ಲಿ 5 ಎಕರೆ ಜಾಗದಲ್ಲಿ ಬಡವರಿಗೆ ನಿವೇಶನ ನೀಡಲಿ ಎಂದರು. ಈಗಾಗಲೆ ತಹಶೀಲ್ದಾರ್ ಕಛೇರಿಗೆ ಹಲವಾರು ಭಾರಿ ಬಡವರಿಗೆ ನೆತ್ತಿಗೊಂದು ಸೂರು ನೀಡಲು ಮನವಿ ಸಲ್ಲಿಸಲಾಗಿದ್ದು ಇದುವರೆವಿಗೂ ಅಧಿಕಾರಿಗಳು ಯವುದೆ ಕ್ರಮ ಕೈಗೊಳ್ಳದೆ ನಾವು ನೀಡಿರುವ ಕಡೆತಗಳನ್ನು ವಿಲೆ ಇಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಬಡವರಿಗೆ ವಾಸಮಾಡಲು ನಿವೇಶನ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. ನಮ್ಮ ಸಂಘದ ವತಿಯಿಂದ ನಾಲ್ಕು ಕಡೆತಗಳನ್ನು ಸಲ್ಲಿಸಿದ್ದು, ನಾವು ಸಲ್ಲಿಸಿರುವ ಮನವಿಯನ್ನು ಕಾನೂನು ಬದ್ದವಾಗಿ ಪರಿಶೀಲನೆ ನಡೆಸಿ ಬಡವರಿಗೆ ನಿವೇಶನ ನೀಡಲಿ ಎಂದು ತಿಳಿಸಿದರು. ಮಹದೇವಪುರ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾದ್ಯಕ್ಷ ಯತೀಶ್ಗೌಡ ಮಾತನಾಡಿ ಕೆ.ಆರ್.ಎಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ನೆತ್ತಿಗೊಂದು ಸೂರು ಕೊಡಿಸುವ ವಿಚಾರದಲ್ಲಿ ಅವರಿಗೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಸೂಚಿಸಿ ಹೋರಾಟಗಾರರಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೆಂಬಲಿಸುವುದಾಗಿ ಬರವಸೆ ನೀಡಿದರು. ತಹಶೀಲ್ದಾರ್ ಕಛೇರಿಯಲ್ಲಿ ಇಲ್ಲದ ಕಾರಣ ಅವರ ಪರವಾಗಿ ಉಪ ತಹಶೀಲ್ದಾರ್ ನಾರಾಯಣಸ್ವಾಮಿ ಮನವಿಯನ್ನು ಸ್ವೀಕರಿಸಿ ಒಂದು ವರದ ಕಾಲಾವಕಾಶದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಬರವಸೆಯನ್ನು ನೀಡಿದರು.
ಈ ಸಂದರ್ಬದಲ್ಲಿ ಕೆ.ಆರ್.ಎಸ್. ರಾಜ್ಯ ಕಾಮರ್ಿಕ ಘಟಕದ ಅಧ್ಯಕ್ಷ ಕನ್ನಲಿ ಕೃಷ್ಣಪ್ಪ, ಕೊಲಾರ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ, ಶ್ರೀನಿವಾಸ್, ಬೆಳತೂರು ವೆಂಕಟೇಶ್, ವೈಟ್ಪೀಲ್ಡ್ ಮುರ್ಗೆಶ್, ಕೆ.ಆರ್.ಪುರ ಉಸ್ತುವಾರಿ ಸಂತೋಷ್, ಕಾಡುಗುಡಿ ವಾಡರ್್ ಸಲೀಮ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here