ಸೆಕ್ಸ್ ಅಸಾಲ್ಟ್. ಪ್ರಕರಣ ಹೊಸ ತಿರುವು

0
175

ಬೆಂಗಳೂರು/ಕೆ.ಆರ್.ಪುರ:ಬಿಗ್ ಬಜಾರ್ ನಲ್ಲಿ ಪ್ರಾಡಕ್ಟ್ ಪ್ರಮೋಟರ್ ಆಗಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಆರೋಪದಲ್ಲಿ ಹುರುಳಿಲ್ಲ ಎಂದ ಕಾರ್ತಿಕ್ 2016ರ ಜುಲೈ 12ರಂದು ಬಿಗ್ ಬಜಾರ್ನಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೊಸ ತಿರುವು, ಪ್ರಕರಣದಲ್ಲಿ ಸುಖಾ ಸುಮ್ಮನೆ ಸಿಲುಕಿಸಲಾಗಿದೆ ಎಂದು ಬಿಗ್ ಬಜಾರ್ ನ ಎ.ಎಸ್.ಎಂ ಅಧಿಕಾರಿ ಕಾರ್ತಿಕ್ ಹೇಳಿಕೆ
ನೀಡಿದ್ದಾರೆ. ಪ್ರತಿಷ್ಟಿತ ಶಾಪಿಂಗ್ ಮಾಲ್ ಗಳಲ್ಲಿ ಒಂದಾದ ಬಿಗ್ ಬಜಾರ್ ನಗರದ ಬಾಣಸವಾಡಿ ರಿಂಗ್ ರಸ್ತೆಯ ಶಾಖೆಯಲ್ಲಿ ಪ್ರಾಡಕ್ಟ್ ಪ್ರಮೋಟರ್ ಆಗಿದ್ದ ಸವಿತಾ ಎಂಬಾಕೆ ನೀಡಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಭಂದಿಸಿದಂತೆ ಬಿಗ್ ಬಜಾರ್ ನ ಎ.ಎಸ್.ಎಂ ಅಧಿಕಾರಿ ಕಾರ್ತಿಕ್ ಮತ್ತು ಡಿ.ಎಂ. ಕಿರಣ್ ಎಂಬುವವರ ಮೇಲೆ ರಾಮಮೂರ್ತಿನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾರ್ಚ 27 2016 ರಂದು ಸವಿತಾಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ನಂತರ ಮಾರ್ಚ್ 28 2016 ರಂದು ಸವಿತಾ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಕಳೆದ ವರ್ಷ 2016ರ ಜುಲೈ 12ರಂದು ಬಿಗ್ ಬಜಾರ್ ನಲ್ಲಿ ನನ್ನ ಮೇಲೆ ಕಾರ್ತಿಕ್ ಹಾಗೂ ಕಿರಣ್ ಅಸಭ್ಯವಾಗಿ ವರ್ತಿಸುತ್ತಿದ್ದರು, ಅಸಭ್ಯವಾಗಿ ನೋಡುತ್ತಿದ್ದರು ಎಂದು ದೂರು ದಾಖಲಿಸಿದ್ದರು. ನಂತರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿದ್ದ ಕಾರ್ತಿಕ್ ಹಾಗೂ ಕಿರಣ್ ಏ 8 ನೇ ತಾರೀಕು ಜಾಮೀನು ಹೊರಬಂದಿದ್ದರು. ಏ 9 ನೇ ತಾರೀಕು ಬಿಗ್ ಬಜಾರ್ಗೆ ಸವಿತಾ ತಮ್ಮವರೊಂದಿಗೆ ಬಂದು ಗಲಾಟೆ ಮಾಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ, ಬಜಾರ್ನಲ್ಲಿ ಅವಧಿ ಮುಗಿದ ವಸ್ತುಗಳನ್ನು ಮಾರಿದ್ದರು ಮತ್ತು ಅದನ್ನು ತೆಗೆದುಕೊಂಡವರು ಬಂದು ಬಿಗ್ಬಜಾರ್ ಶಾಖೆಯ ಬಳಿ ಬಂದು ಗಲಾಟೆ ಮಾಡಿದ್ದರು, ಈ ಕಾರಣಕ್ಕಾಗಿ ಸವಿತಾಳನ್ನು ವಸ್ತುಗಳ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಎಚ್ಚರಿಕೆ ನೀಡಿ ಬೇರೊಂದು ಶಾಖೆಗೆ ವರ್ಗಾಯಿಸುಕೊಳ್ಳುವಂತೆ ಮೇಲಧಿಕಾರಿಗಳಿಗೆ ತಿಳಿಸಿದ್ದರು. ಇದರಿಂದ ಕೊಪಗೊಂಡು ಆಗಾಗ ಶಾಖೆಗೆ ಬಂದು ಗಲಾಟೆ ಮಾಡುತ್ತಿದ್ದಳು. ಸವಿತಾಳನ್ನು ಕೆಲಸದಿಂದ ತೆಗೆದು ಹಾಕಲು ಕಾರಣ ನಾನೆಂದು ತಿಳಿದು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ. ಘಟನೆಗೆ ಸಂಭಂದಿಸಿದಂತೆ ಸಿಸಿಟಿವಿ ದೃಷ್ಯಾವಳಿಗಳನ್ನು ಒದಗಿಸಲಾಗಿದೆ ಎಂದು ಕಾರ್ತಿಕ್ ತಿಳಿಸಿದ್ದಾರೆ. ನನ್ನ ಮೇಲೆ ನೀಡಿರುವ ದೂರುಗಳಲ್ಲಿ ಹುರುಳಿಲ್ಲ ಯಾವುದೇ ಕಾರಣಕ್ಕೂ ನಾನೂ ಲೈಂಗಿಕ ದೌರ್ಜನ್ಯ ಎಸಗಿಲ್ಲ, ಕೆಲಸದಿಂದ ತೆಗೆದು ಹಾಕಿದ್ದು ನಾನೆ ಎಂಬ ಕಾರಣದಿಂದ ಈ ರೀತಿ ಮಾಡುತ್ತಿದ್ದಾರೆ ವಿನಃ ಬೇರೇನೂ ಇಲ್ಲ, ಆಕೆಯೊಂದಿಗೆ ನಾನು ವ್ಯವಹರಿಸುತ್ತಿರಲಿಲ್ಲ, ಕೇವಲ ಎದುರು ಬದಿರಾದಾಗ ಅಷ್ಟೇ ಮಾತನಾಡುತ್ತಿದ್ದು, ಅವರು ಕೆಲಸ ಮಾಡುವ ಜಾಗಕ್ಕೆ ನಾನು ಹೋಗುತ್ತಲೇ ಇರಲಿಲ್ಲ. ಶಾಖೆಯಲ್ಲಿ ಎಲ್ಲಾ ಕಡೆ ಸಿಸಿಟಿವಿಗಳಿದ್ದು ಯಾವುದೇ ಅಕ್ರಮ ಅನೈತಿಕತೆಗೆ ಆಸ್ಪದವಿಲ್ಲ. ನನ್ನ ಬಳಿ ಮೂರ್ನಾಲ್ಕು ಬಾರಿ ಹಣ ಕೇಳಿದ್ದಳು ನಾನು ಅದಕ್ಕೆ ಸ್ಪಂದಿಸಿಲ್ಲ ಆಗಾಗ ಆಕೆ ನನಗೆ ಮೇಸೇಜ್ ಗಳನ್ನು ಕಳುಹಿಸುತ್ತಿದ್ದಳು ಆದರೇ ನಾನೂ ಮಾಡುತ್ತಿರಲಿಲ್ಲ ಎಂದು ಕಾರ್ತಿಕ್ ತಿಳಿಸಿದ್ದಾನೆ. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪ್ರಕರಣಗಳು ಸುಳ್ಳುಗಳಿಂದ ಕೂಡಿದ್ದು ಹಳ್ಳ ಹಿಡಿದಿದ್ದವು, ಈ ಪ್ರಕರಣವು ಸಹ ಸುಳ್ಳಿರುವ ಸಾಧ್ಯತೆ ಇರುವುದರಿಂದ ಪೋಲಿಸರ ವಿಚಾರಣೆ ಯಿಂದಷ್ಟೆ ಸತ್ಯಹೊರಬರಬೇಕಿದೆ.

LEAVE A REPLY

Please enter your comment!
Please enter your name here