ಸೇರ್ಪಡೆಗೆ ಅಡಚಣೆ, ವಿಫಲಪ್ರಯತ್ನ.

0
156

ಚಿಕ್ಕಬಳ್ಳಾಪುರ/ ಚಿಂತಾಮಣಿ:- ಜೆಡಿಎಸ್ ಬೆಂಬಲಿತ ನಗರಸಭೆ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಎ.ಆರ್ ಅನ್ವರ್ ರವರ ಕುಟುಂಬದ ಅಣ್ಣ ಎ.ಜೆ ಅಮೀರ್ ಜಾನ ಮತ್ತು ಎ.ಆರ್ ಅಬ್ದುಲ್ ಜಾಲೀಲ್@ಬಾಬು ಹಾಗೂ ಅವರ ಬೆಂಬಲಿಗ ರೊಂದಿಗೆ ಡಾ.ಎಂ.ಸಿ ಸುಧಾಕರ್ ರವರ ಅಧಿಕೃತ ನಿವಾಸದಲ್ಲಿ ಜೆ.ಡಿ.ಎಸ್ ಹಲವಾರು ಕಾರ್ಯಕರ್ತರು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣಕ್ಕೆ ಸೇರ್ಪಡೆಯಾದರು.

ಕ್ಷೇತ್ರದ ಜೆಡಿಎಸ್ ಪಕ್ಷದಲ್ಲಿ ಹಿರಿಯ ನಾಯಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮರ್ಯಾದೆ ಇಲ್ಲದಂತಾಗಿದೆ ಎಂದು ಆರೋಪಿಸಿದ ಜೆ.ಡಿ.ಎಸ್ ನಗರಸಭಾ ಮಾಜಿ ಅಧ್ಯಕ್ಷ ಎ.ಆರ್ ಅನ್ವರ್ ರವರ ಅಣ್ಣ ಮತ್ತು ತಮ್ಮ ಜೆಡಿಎಸ್ ತೊರೆದು ಸುಧಾಕರ್ ಬಣಕ್ಕೆ ಸೇರ್ಪಡೆಯಾಗಿರುವುದಾಗಿ ಹೇಳಿದರು.

ಡಾ.ಎಂ.ಸಿ ಸುಧಾಕರ್ ರವರ ಅಧಿಕೃತ ನಿವಾಸದಲ್ಲಿ ಏರ್ಪಡಿಸಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ರವರು, ಎ.ಜೆ ಅಮೀರ್ ಜಾನ ಮತ್ತು ಎ.ಆರ್ ಅಬ್ಬುಲ್ ಜಲೀಲ್@ ಬಾಬು ಹಾಗೂ ಅವರ ಬೆಂಬಲಿಗರಿಗೆ ಹೂಮಾಲೆ ಹಾಕುವ ಮೂಲಕ ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಆರ್ ಅಬ್ದುಲ್ ಜಲೀಲ ನಮ್ಮ ಅಣ್ಣ ನಗರಸಭೆ ಅಧ್ಯಕ್ಷರಾಗಿದ್ದಾಗ ಯಾವುದೇ ತರಹ ಮರ್ಯಾದೆ ಕೊಟ್ಟಿಲ್ಲ ಹಾಗಾಗಿ ನಾವು ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.

ನಮ್ಮ ಸುದ್ದಿ ವಾಹಿನಿಯಲ್ಲಿ ಗುರುವಾರ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದೆವು ಶುಕ್ರವಾರ ನಗರಸಭೆ ಮಾಜಿ ಅಧ್ಯಕ್ಷ ಎ.ಆರ್ ಅನ್ವರ್ ರವರು ಸೇರ್ಪಡೆಯಾಗುತ್ತರೆ ಎಂದು ಪ್ರಕಟವಾದ ಹಿನ್ನೆಲೆಯಲ್ಲಿ ಕೆಲ ಮುಖಂಡರು ಎ.ಆರ್ ಅನ್ವರ್ ಅವರನ್ನು ಮನೆಯಿಂದ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಜಾಲತಾಣದಲ್ಲಿ ವಿಡಿಯೋಗಳು ಅಪ್ಲೋಡ್ ಮಾಡಲಾಗಿದೆ.

ನಗರಸಭೆ ಮಾಜಿ ಅಧ್ಯಕ್ಷ ಶುಕ್ರವಾರ ಮಾಜಿ ಶಾಸಕರ ಬಣಕ್ಕೆ ಸೇರ್ಪಡೆ ಯಾಗದಂತೆ ಕೆಲ ಮುಖಂಡರು ವಿಫಲ ಪ್ರಯತ್ನ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಮಾತನಾಡುತ್ತಾ, ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನಗರ ಸೇರಿದಂತೆ ತಾಲೂಕಿನಾಧ್ಯಂತ ಅಭಿವೃದ್ಧಿ ಮಾಡುವುದನ್ನು ಮರೆತು ಕಾಲಹರಣ ಮಾಡುತ್ತಿದ್ದು, ನಗರ ಹಾಗೂ ತಾಲ್ಲೂಕಿನ ಅಭಿವೃದ್ದಿ ಕುಂಠಿತವಾಗಿದೆ. ಇದರಿಂದಾಗಿ ನಗರ ಸೇರಿದಂತೆ ತಾಲೂಕಿನ ಜನತೆ ಮುಂದಿನ ಚುನಾವಣೆಯಲ್ಲಿ ಜೆ.ಕೆ ಕೃಷ್ಣಾರೆಡ್ಡಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಶ್ರೀನಾಥ್ ಬಾಬುರೆಡ್ಡಿ, ನಿಸಾರ್ ಷಾ, ರತ್ನಮ್ಮ, ಇಲಿಯಾಜ್, ದೇವರಾಜ್, ತೌಡ್ ಮಂಜುನಾಥ್, ಕಲಾಯಿ ಶ್ರೀನಿವಾಸ್, ಅಲ್ಲಾ ಬಕಾಷ್, ಮುಖಂಡರಾದ ಮಂಜುನಾಥ್‍,ಮಾಜಿ ನಗರಸಭಾ ಸದಸ್ಯ ರಿಯಾಜ್ ಖಾನ್, ಅಬ್ದುಲ್ ಘನಿ , ವೆಂಕಟರಮಣಪ್ಪ ,ರಹಮಾತ್ ಉಲ್ಲಾ ಬೇಗ್ವ,ಅಬ್ದುಲ್ ರಶೀದ ,ಸೈಯದ್ ಎಜಾಜ್ ,ಶೇಖ್ ಅಹಮದ್ ,ಸುಲ್ತಾನ್, ಮುಸ್ತಫಾ ,ಮುಕಾಮೀಲ್ , ಅಯ್ಯರ್, ನಾಗರಾಜ್, ವರದರಾಜು, ಮೂನ್‍ ಸ್ಟಾರ್ ಗೌಸ್, ಸೀನಪ್ಪ, ಲಪಾಟ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here