ಸೇರ್ಪಡೆ ಕಾರ್ಯಕ್ರಮ

0
102

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಅಂಜಿನಿ ನಿವಾಸದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ , ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷರು ಲಕ್ಷ್ಮೀನಾರಾಯಣ ರೆಡ್ಡಿ ರವರು ಜೆಡಿಎಸ್ ಪಕ್ಷ ತೊರೆದು ಮಾತೃ ಪಕ್ಷವಾದ ಡಾ ಎಂ.ಸಿ.ಸುಧಾಕರ್ ರವರ ಬಣಕ್ಕೆ ಸೇರ್ಪಡೆಯಾದರು .ಅವರ ಜೊತೆಯಲ್ಲಿ
ಗ್ರಾಮ ಪಂಚಾಯಿತಿ ಸದಸ್ಯರು ಸರಸ್ವತಿ, ರಮೇಶ್ , ಗ್ರಾಮ ಪಂಚಾಯಿತಿ ಸದಸ್ಯರಾದ ಶೆಟ್ಟಹಳ್ಳಿ ರಾಜಣ್ಣ , ಕೃಷ್ಣಾ ರೆಡ್ಡಿ ,ಮುರುಗುಮಲ್ಲ ಅಮೀರ್ ಜಾನ್ , ಪೂಜಾರಿ ನಾಗರಾಜ್ ರವರು ಜೆಡಿಎಸ್ ತೊರೆದು ಮಾಜಿ ಶಾಸಕರ ಬಣಕ್ಕೆ ಸೇರ್ಪಡೆಯಾದರು .

ಲಕ್ಷ್ಮೀನಾರಾಯಣರೆಡ್ಡಿ ರವರು ಮಾತನಾಡಿ ದಿವಂಗತ ಆಂಜನೇಯರೆಡ್ಡಿ ಜೊತೆಯಲ್ಲಿಯೇ ನಮ್ಮ ತಾತ ಮಾಜಿ ಗೃಹಸಚಿವ ಚೌಡರೆಡ್ಡಿ ಜೊತೆಯಲ್ಲಿ ನಮ್ಮ ತಂದೆ ಸುಮಾರು ನಲವತ್ತು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ ನಂತರ ಕೆಲವು ಕಾರಣಾಂತಗಳಿಂದ ನಾವು ದೂರ ಹೋಗಿರಬಹುದು ಆದರೆ ಅದೆಲ್ಲ ಮರೆತು ನಾವು ನಮ್ಮ ಮನೆಗೆ ನಾವು ವಾಪಸ್ ಬಂದಿದ್ದಿವಿ ಎಂದರು .

ಈ ತಾಲೂಕಿನಲ್ಲಿ ಎಂ ಸಿ ಸುಧಾಕರ್ ರವರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ನೋಡಿದರೆ ದೂರ ದೃಷ್ಟಿಯ ಯೋಜನೆಗಳು ನಮ್ಮ ಚಿಂತಾಮಣಿ ತಾಲೂಕಿಗೆ ಅನುಕೂಲ ವಾಗುವಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಮೊದಲು ಆಂಜನೇಯರೆಡ್ಡಿ ರವರ ಕಾಲದಿಂದಲೂ ಸಹಾ ಇವರ ಕುಟುಂಬದವರು ತಾಲೂಕು ಅಭಿವೃದ್ಧಿ ಮಾಡುವುದರಲ್ಲಿ ಮುಂದಾಗಿದ್ದಾರೆ ಎಂದು ಹೇಳಿದರು.ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಎಂ ಸಿ ಸುಧಾಕರ್ ರನ್ನು ಗೆಲ್ಲಿಸಿ ಶಾಸಕರನ್ನಾಗಿಸುವುದೇ ನಮ್ಮೆಲ್ಲರ ಗುರಿ ಎಂದರು.

 

ಈ ಸಂದರ್ಭದಲ್ಲಿ ಮುಖಂಡರಾದ ಮುನಿಶಾಮರೆಡ್ಡಿ , ಎ ಪಿ ಎಂ ಸಿ ಸದಸ್ಯರಾದ
ಶ್ರೀ ರಾಮ ರೆಡ್ಡಿ , ಗ್ರಾಮ ಪಂ ಉಪಾಧ್ಯಕ್ಷರಾದ ಮುನಿರಾಜು , ಗ್ರಾಮ ಪಂ ಸದಸ್ಯರಾದ ಹಾಜಿ ಅನ್ಸರ್ ಖಾನ್ , ಗ್ರಾಮ ಪಂ ಸದಸ್ಯರಾದ ಶ್ರೀ ನಿವಾಸ್ ,ಗುತ್ತಿಗೆದಾರ ಕೃಷ್ಣಮೂರ್ತಿ, ಗೂವಿಂದ ರಾಜು, ಶ್ರೀನಿವಾಸ್ , ಕೋಚಿಮಲ್ ನಿರ್ದೇಶಕ ಊಲವಾಡಿ ಅಶ್ವಥ್ ನಾರಾಯಣ್ ಬಾಬು, ಜಿ, ಪಂ ಸದಸ್ಯೆ ಪವಿತ್ರ ಚಂದ್ರ ಶೇಖರ್ , ನಂದಿಗಾನ ಹಳ್ಳಿ ಅಶ್ವತಪ್ಪ , ನಗರಸಭೆಯ ನಾಮ ನಿರ್ದೇಶಕ ಸದಸ್ಯರಾದ ನಿಸಾರ್ ಶಾ , ಕಲಿಯಿ ಶ್ರೀ ನಿವಾಸ್ , ರಘುನಾಥ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here