ಸೋನು ಡಂಗರ್ ನ ಬಂದಿಸುವಂತೆ ಒತ್ತಾಯಿಸಿ ಪ್ರತಿಭಟನೆ.

0
313

ಬೆಂಗಳೂರು/ಹೊಸಕೋಟೆ:- ಪ್ರವಾದಿ ಮಹ್ಮದ್ ಪೈಂಗಬರ್ರನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ ಮುಸ್ಲಿಂ ಸಮುದಾಯವನ್ನು ಕೀಳಾಗಿ ಮಾತನಾಡಿರುವ ಸೋನು ಡಾಂಗರ್ರವರನ್ನು ಬಂದಿಸಿ ಕಾನೂನು ಕ್ರಮ ಜರುಗಿಸಿ ಉಗ್ರವಾದ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮುಸ್ಲಿಂ ಬಾಂದವರು ಪ್ರತಿಭಟನೆ ಅಮ್ಮಿಕೊಂಡಿದ್ದು ತಹಸಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು,

ನಗರದ ಮಾಕರ್ೆಟ್ ಸರ್ತೆಯ ಜಾಮೀಯಾ ಮಸೀದಿಯಿಂದ ಹೊರಟ ಸಾವಿರಾರು ಮುಸ್ಲಿಂ ಬಾಂದವರು ಸೋನು ಡಾಂಗರ್ ವಿರುದ್ದ ದಿಕ್ಕಾರಗಳನ್ನು ಕೂಗಿ ಟೈರ್ಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು, ನಂತರ ತಾಲ್ಲೂಕು ದಂಡಾಧಿಕಾರಿಗಳ ಪರವಾಗಿ ಶಿರಸ್ತೆದಾರ್ ನಾಗರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು,

ಈ ಬಗ್ಗೆ ಮಾತನಾಡಿದ ಜನಾಂಗದ ಮುಖಂಡ ಸೌರತ್ ಸೋನು ಡ್ಯಾಂಗರ್ ಎಂಬ ಮಹಿಳೆ ಗುಜರಾತಿನಲ್ಲಿ ನಮ್ಮ ಸಮುದಾಯದ ಪ್ರವಾದಿ ಮಹ್ಮದ್ ಪೈಂಗಬರ್ರನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ ಮುಸ್ಲಿಂ ಸಮುದಾಯವನ್ನು ಕೀಳಾಗಿ ಮಾತನಾಡಿದ್ದಾರೆ ಜೊತೆಗೆ ಪ್ರವಾದಿ ಮಹ್ಮದ್ ಪೈಂಗಬರ್ ಒಬ್ಬ ಮನುಷ್ಯ ಅವನು ದೇವನಲ್ಲ ಎಂದು ಏಕ ವಚನದಲ್ಲಿ ಮಾತನಾಡಿ ನಮ್ಮ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೂಡಲೆ ಕೇಂದ್ರ ಸಕರ್ಾರ ಸೋನು ಡ್ಯಾಂಗರ್ ಬಂದಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ದೇಶದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೆಚ್ಚರಿಕೆ ನೀಡಿದರು,  ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಮಸೀದಿಗಳ ಮುಖಂಡರು ಯುವಕರು ಟೌನಿನಿ ಮುಸ್ಲಿಂ ಬಾಂದವರು ಹಾಜರಿದ್ದರು.

LEAVE A REPLY

Please enter your comment!
Please enter your name here