ಸ್ವಂತಿಕೆಯನ್ನು ನಂಬುವುದು ಮನುಷ್ಯನನ್ನು ಉತ್ತುಂಗಕ್ಕೆ ಕರೆದೊಯ್ಯಲಿದೆ.

0
218

ಬೆಂಗಳೂರು/ಕೃಷ್ಣರಾಜಪುರ: ಸ್ವಂತಿಕೆಯನ್ನು ನಂಬುವುದು ಮನುಷ್ಯನನ್ನು ಉತ್ತುಂಗಕ್ಕೆ ಕರೆದೊಯ್ಯಲಿದೆ ಎಂದು ಹೆಡ್ ಸ್ಟಾರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಸಮೀನಾ ಮಹಮೂದ್ ತಿಳಿಸಿದರು. ಇಲ್ಲಿನ ಕೇಂಬ್ರಿಡ್ಜ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, 6ರಿಂದ 16ರ ಮಕ್ಕಳ ವಯಸ್ಸು ಅತ್ಯಧ್ಬುತ ಬೆಳವಣಿಗೆ ಕಾಣಬಲ್ಲ ವಯಸ್ಸು, ಮಕ್ಕಳು ಪಠ್ಯಗಳ ಹೊರತು, ಪಠ್ಯದಿಂದಾಚೆಗೆ ನಡೆಸುವ ಅಧ್ಯಯನ ಅಪಾರ ಯಶಸ್ಸು ತಂದೊಡ್ಡುತ್ತದೆ, ಬೇರೊಂದರಲ್ಲಿ ನಂಬಿಕೆಯಿಟ್ಟು ಜೀವಿಸುವುದು ನಿಯಮಿತ ಯಶಸ್ಸು ಮಾತ್ರ ಸಾಧಿಸಲು ಸಾಧ್ಯವಿದ್ದು, ಸ್ವಂತಿಕೆಯಲ್ಲಿ ನಂಬಿಕೆಯಿಟ್ಟರೆ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಕೇಂಬ್ರಿಡ್ಜ್ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಅಧ್ವಿತೀಯ ಸಾಧನೆ ಮಾಡುತ್ತಿದ್ದು, ಈ ಭಾಗದ ಮಕ್ಕಳನ್ನು ಭೌಗೋಳಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಲು ಸಮರ್ಥರನ್ನಾಗಿಸುವ ಕಾರ್ಯ ಮಾಡುತ್ತಿದೆ, ಶಾಲಾ ವಾರ್ಷಿಕೊತ್ಸವಗಳು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ವಾರ್ಷಿಕೊತ್ಸವದಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಪ್ರತಿಭೆಯ ಅನಾವರಣದಿಂದ ಸ್ಪರ್ಧಾತ್ಮಕ ಮನೋಭಾವ, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಉತ್ಸಾಹವನ್ನು ಹೊಂದುತ್ತಾರೆ, ವಾರ್ಷಿಕೊತ್ಸವಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು, ಪಠ್ಯದಿಂದ ಹೊರಕ್ಕೆ ಚಿಂತಿಸುವ ಕಲಿಯುವ ಮನೋಭಾವವನ್ನು ರೂಡಿಸಿಕೊಳ್ಳಲು ಪ್ರೇರೇಪಿಸಬೇಕೆಂದು ತಿಳಿಸಿದರು. ಇದೆ ವೇಳೆ ಶಾಲಾ ವಿದ್ಯಾರ್ಥಿಗಳು ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನೆರೆದಿದ್ದವರ ಗಮನ ಸೆಳೆದರು. ಶಾಲಾ ತರಗತಿಗಳಲ್ಲಿ ನಡೆದ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಬಿ.ಎ.ಬಸವರಾಜ, ಕೇಂಬ್ರಡ್ಜ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ.ಕೆ.ಮೋಹನ್, ಟಿಸಿಎಸ್ ವ್ಯವಸ್ಥಾಪಕ ನಿರ್ದೇಶಕಿ ಅಂಜನಾ ಕೆ.ಆರ್, ಶೀತಲ್, ವೀಣಾ ಶಶಿಧರ್, ಬೆಂಜಮಿನ್, ಸ್ಟ್ರಾಟ್ ಫೋರ್ಡ್ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು. ಸುದ್ದಿಚಿತ್ರ 6ಕೆಆರ್ಪಿ 1ರಲ್ಲಿ ಕೇಂಬ್ರಿಡ್ಜ್ ಶಾಲಾ ವಾರ್ಷಿಕೊತ್ಸವದ ಅಂಗವಾಗಿ ಶಾಲೆಯ ತರಗತಿಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.

LEAVE A REPLY

Please enter your comment!
Please enter your name here