ಸ್ವಂತಿಕೆಯಲ್ಲೂ ಆದರ್ಶದ ಮಾನವೀಯತೆ.

0
331

ಬಳ್ಳಾರಿ :ಸಿರುಗುಪ್ಪ ಸ್ವಂತಿಕೆಯಲ್ಲೂ ಆದರ್ಶದ ಮಾನವೀಯತೆ.ನಿಶ್ಚಿತಾರ್ಥ, ಮದುವೆ, ನಾಮಕರಣ,
ಇಂತಹ ಸಮಾರಂಭಗಳೇ ವ್ಯಯಕ್ತಿಕ ಮತ್ತು ಸ್ವಂತಿಕೆ, ಕುಟುಂಬ, ನೆಂಟರು, ಆಪ್ತರು ಹಾಗೂ ಸ್ನೇಹಿತರ ಜೊತೆ ತಮ್ಮದೇ ಬೀಗುವಿಕೆ. ಅದರಲ್ಲೂ ವೈಶ್ಯರಲ್ಲಿ ಸಾಮಾನ್ಯವಾಗಿ ಆಡಂಬರದ ಸಮಾರಂಭಗಳೇ ಹೆಚ್ಚು.

ಇದಕ್ಕೆಲ್ಲಾ ಹೊರತಾಗಿಯೂ ಇಲ್ಲಿ ಮಾನವೀಯತೆ ಗರಿಗೆದರಿದೆ. ನಗರದ ಹೊಸಳ್ಳಿ ಮಂಜು ತನ್ನ ಮದುವೆ ಆರತಕ್ಷತೆಯ ಸಮಾರಂಭವನ್ನು ವಿಶಿಷ್ಠವಾಗಿ ಆಚರಿಸಿ ಕೊಳ್ಳಲು ನಿಶ್ಚಯಿಸಿ ಇತರರಿಗೆ ಹೊಸ ಸಂದೇಶ ನೀಡಲು ನಿದರ್ಶನವಾಗುತ್ತಿದ್ದಾನೆ. ಮೊದಲಿನಂದಲೂ ಸಿಗುವ ಸ್ವಲ್ಪ ಸಮಯದಲ್ಲಿಯೆ ಸಮಾಜ ಸೇವೆ ಮಾಡುವ ಹಪಿಹಪಿಯುಳ್ಳ ಈ ತರುಣನಿಗೆ ತನ್ನ ಮದುವೆಯ ಆರತಾಕ್ಷತೆ ಸಮಾರಂಭವನ್ನೇ ವೇದಿಕೆ ಮಾಡಿಕೊಂಡಿದ್ದಾನೆ.

ಮೊನ್ನೆಯ 14ರಂದು ರಾಯಚೂರಿನಲ್ಲಿ ಗೀತಾಳೊಂದಿಗೆ ಪಾಣಿಗ್ರಹಣ ಮಾಡಿ ನಾಳೆ ದಿ.19 ರಂದು ತನ್ನ ಆರತಾಕ್ಷತೆ ಸಮಾರಂಭವನ್ನು ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೇವಲ ಆಡಂಬರದ ಆರತಾಕ್ಷತೆಯನ್ನಷ್ಟೇ ಮಾಡಿಕೊಳ್ಳದೆ ಜೊತೆಗೆ ತನ್ನ ಇಡೀ ಕುಟುಂಬದವರನ್ನು ತಮ್ಮ ಕಣ್ಣುಗಳನ್ನು ಮರಣಾನಂತರ ನೇತ್ರದಾನ ಮಾಡಲು ಮನವೊಲಿಸಿದ್ದಾನೆ. ಜೊತೆಗೆ ಎಲ್ಲರೂ ನೇತ್ರದಾನ ಮಾಡಲಿದ್ದಾರೆ. ಇದಲ್ಲದೆ ಈ ಸಂದರ್ಭದಲ್ಲಿ ಬುದ್ದಿಮಾಂದ್ಯ ಮಕ್ಕಳೊಂದಿಗೆ ಸೇರಿ ಅವರೂ ಇಂತಹ ಸಮಾರಂಭಗಳಲ್ಲಿ ಪಾಲ್ಗೊಂಡು ಸಂಭ್ರಮಿಸು ವಂತಾಗಲು ಇಚ್ಛಿಸಿ ಅವರೊಂದಿಗೆ
ಆರತಕ್ಷತೆ ಮಾಡಿಕೊಳ್ಳುತ್ತಿದ್ದಾನೆ.

ಇಂತಹ ಆದರ್ಶತೆಗಳು ಎಲ್ಲರಲ್ಲಿಯೂ ಬರಲಿ ಎಂದಿದ್ದಾನೆ.

LEAVE A REPLY

Please enter your comment!
Please enter your name here