ಸ್ವಚ್ಚತಾ ಕಾರ್ಯಕ್ರಮ ಜಾಥಾ

0
68

ಮಂಡ್ಯ/ಮಳವಳ್ಳಿ: ರೋಟರಿ ಸಂಸ್ಥೆ .‌ಇನ್ನರ್ ವೀಲ್ಹ್ ಸಂಸ್ಥೆ , ಮತ್ತು ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ವತಿಯಿಂದ ಸ್ವಚ್ಚತಾ ಕಾರ್ಯಕ್ರಮದ ಜಾಥ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ತಾಲ್ಲೂಕು ಪಂಚಾಯಿತಿ ಯಿಂದ ರೋಟರಿ ಶಾಲೆ ವಿದ್ಯಾರ್ಥಿಗಳು ಹಾಗೂ ರೋಟರಿ ಸಂಸ್ಥೆ ಪದಾಧಿಕಾರಿಗಳು ಸ್ವಚ್ಚತಾ ಬಗ್ಗೆ ಅರಿವಿನ ಜಾಥವನ್ನು ನಡೆಸಿದರು. ನಂತರ. ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ. ದಲ್ಲಿ ಕಸವನ್ನು ಪೊರಕೆ ಸ್ವಚ್ಛ ಮಾಡಿದರು.
ಕಾರ್ಯಕ್ರಮ ದಲ್ಲಿ ರೋಟರಿ ಸಂಸ್ಥೆ ಸುರೇಶ್ ಮಾತನಾಡಿ ಸ್ವಚ್ಚತಾ ಬಗ್ಗೆ ಅರಿವು ಮೂಡಿಸಲು ಈಕಾರ್ಯಕ್ರಮ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ದೇಶದಲ್ಲಿ ಜಾಗೃತಿ ಕಾಣಬಹುದು ಎಂದರು.ರೋಟರಿ ಸಂಸ್ಥೆ ಅಧ್ಯಕ್ಷ ಸತೀಸ್ ಪೂಜಾರಿ ಮಾತನಾಡಿ,ನಮ್ಮ ಶಾಲೆ ವಿದ್ಯಾರ್ಥಿಗಳ ಮೂಲಕ ಜನರಲ್ಲಿ ಸ್ವಚ್ಚತೆಯ ಅರಿವು ಮೂಡಿಸಿದ್ದು ಇದು ಸಾಲದು ಜನರಲ್ಲೂ ಸ್ವಯಂಪ್ರೇರಿತವಾಗಿ ಈ ಭಾವನೆ ಮೂಡಿದರೆ ಸ್ವಚ್ಚತಾ ಭಾರತ್ ಕನಸು ನನಸಾಗಲು ಸಾಧ್ಯ ಎಂದರು.

ಕಾರ್ಯಕ್ರಮ ದಲ್ಲಿ ಗೌತಮ್ ಚಂದ್ರ, ಘನಶ್ಯಾಮ್ ದಾಸ್. ವಿದ್ಯಾಪ್ಯಾರ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್ ಹಾಗೂ ಶಾಲಾ ವಿದ್ಯಾರ್ಥಿ ಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here