ಸ್ವಚ್ಚತಾ ಕಾರ್ಯಕ್ರಮ..

0
142

ಬೆಂಗಳೂರು/ಕೆ ಆರ್ ಪುರ:ವಿಧಾನ ಸಭಾ ಕ್ಷೇತ್ರದ ದೇವಸಂದ್ರ ಮುಖ್ಯ ರಸ್ತೆ,ರಾಜರಾಜೇಶ್ವರಿ ದೇವಸ್ತಾನ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ  ಮಾಜಿ ಶಾಸಕ ಎನ್.ಎಸ್.ನಂದೀಶರೆಡ್ಡಿ ನೇತೃತ್ವದಲ್ಲಿ ಕ್ಷೇತ್ರ ಯುವಮೋರ್ಚ ವತಿಯಿಂದ  ಸ್ವಚ್ಚತಾ ಕಾರ್ಯ ಮಾಡಲಾಯಿತು.ನಂತರ ಮಾತನಾಡಿದ ಮಾಜಿ ಶಾಸಕ ಎನ್.ಎಸ್.ನಂದೀಶರೆಡ್ಡಿ ಮಾತನಾಡಿ, ದೇಶ ಸ್ವಚ್ಚವಾಗಲು ಪ್ರತಿಯೊಬ್ಬ ವ್ಯಕ್ತಿಯೂ ಕಸದ ನಿರ್ವಹಣೆಯನ್ನು ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಮನುಷ್ಯ ತನ್ನ ಅಗತ್ಯಗಳಿಗೆ ಉಪಯೋಗಿಸುವ ನಿತ್ಯ ಬಳಕೆ ವಸ್ತುಗಳಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಮನೆಯಿಂದ ಹೊರ ಹಾಕಿ ಸ್ವಚ್ಚವಾಗಿಟ್ಟುಕೊಳ್ಳುವಂತೆ, ತಮ್ಮ ಬಡಾವಣೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದರು. ತಮ್ಮ ಗಮನಕ್ಕೆ ಬರುವ ತ್ಯಾಜ್ಯವನ್ನು ಸೂಕ್ತ ವ್ಯವಸ್ಥೆಗಳೊಂದಿಗೆ ವಿಲೇವಾರಿ ಮಾಡುವ ಕರ್ತವ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ, ತ್ಯಾಜ್ಯ ವಿಂಗಡಣೆ ಮಾಡುವಲ್ಲಿ ನಾಗರಿಕರು ನಿರ್ಲಕ್ಷ್ಯ ತೋರುವುದು ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ತೊಡಕಾಗುತ್ತದೆ, ತ್ಯಾಜ್ಯವನ್ನು ಬೇರ್ಪಡಿಸದೆ ಕೆಲವರು ಕೆರೆ ಪ್ರದೇಶ, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಬಿಸಾಡುತ್ತಾ ತ್ಯಾಜ್ಯ ನಿರ್ವಹಣೆಯ ಹೊಣೆಯಿಂದ ನುಣುಚಿಕೊಳ್ಳುತ್ತಿದ್ದಾರೆ, ಈ ಬೆಳವಣಿಗೆ ನಾವು ಜೀವಿಸುವ ಪರಿಸರಕ್ಕೆ ಕೊನೆಗೆ ನಮಗೇ ಒಳಿತಲ್ಲ, ನಾಗರಿಕತೆ ಬೆಳೆದಂತೆ ನಗರೀಕರಣ ಪರಿಸರಕ್ಕೆ ಕೆಲ ದುಷ್ಪರಿಣಾಮಗಳನ್ನು ಬೀರುತ್ತಿದ್ದು ಪ್ರಕೃತಿಯ ರಕ್ಷಣೆಯ ಹೊಣೆ ನಾಗರಿಕರಾದ ನಮ್ಮ ಕರ್ತವ್ಯವೇ ಆಗಿದೆ, ಅದನ್ನು ನಿಭಾಯಿಸುವ ಪ್ರಜ್ಞೆ ಪ್ರತಿಯೋರ್ವರು ರೂಢಿಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಪೂರ್ಣಿಮಾ ಶ್ರೀನಿವಾಸ್, ಬಂಡೆ ರಾಜು, ಕ್ಷೇತ್ರದ ಅಧ್ಯಕ್ಷ ಚಿದಾನಂದ್, ವಾರ್ಡ್‌ ಅಧ್ಯಕ್ಷರು ನಾಗೇಶ್ವರ ರಾವ್, ಸ್ವಚ್ಚ ಭಾರತ್ ಸಂಚಾಲಕ ಕೇಶವಮೂರ್ತಿ, ಮುಖಂಡರು ದೇವೇಂದ್ರ, ಕಲ್ಕೆರೆ ಶ್ರೀನಿವಾಸ್, ಸಿಗೆಹಳ್ಳಿ ಸುಂದರ್, ಶ್ರೀರಾಮುಲು, ಗಜೇಂದ್ರ ಸಿಂಗ್, ವಾರ್ಡು ಮಹಿಳ ಅಧ್ಯಕ್ಷರು ಸಿತಮ್ಮ, ಯುವಮೋರ್ಚ ಅಧ್ಯಕ್ಷ ಬಾಲು, ಬಾಲಾಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here