ಸ್ವಚ್ಚತೆ ಇಲ್ಲಿ ಮರೀಚಿಕೆ…!?

0
130

ಮಂಡ್ಯ/ಮಳವಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳು ಅಭಿವೃದ್ಧಿ ಯಾಗಬೇಕೆಂದು ಸ್ವಚ್ಚಭಾರತ್ ಯೋಜನೆ, ನರೇಗಾ ಯೋಜನೆ, ಸೇರಿದಂತೆ ಆನೇಕ ಯೋಜನೆಗಳು ನೇರವಾಗಿ ಗ್ರಾಮಪಂಚಾಯಿತಿ ತಲುಪವಂತೆ ಮಾಡಿರುವುದು ಇಡೀ ದೇಶಕ್ಕೆ ಗೊತ್ತಿರುವ ವಿಷಯ ಆದರೆ ಇಲ್ಲೊಂದು ಗ್ರಾಮ ಪಂಚಾಯಿತಿಗೆ ಯೋಜನೆ ಬಗ್ಗೆ ಮಾಹಿತಿ ಇಲ್ಲದೆ ಇರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಅದೂ ಮಾಜಿ ಶಾಸಕ ಪಿ.ಎಂ ನರೇಂದ್ರ ಸ್ಚಾಮಿ ರವರ ಸ್ವಗ್ರಾಮ ಎಂದರೆ ನಂಬುವೀರಾ ! ನಿಜ.

ಈ ಯೋಜನೆ ಇದೆ ಅನ್ನುವ ಪರಿಜ್ಞಾನವಿಲ್ಲದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ , ಸದಸ್ಯ ರಾಗಲಿ ನಡೆದುಕೊಳ್ಳುತ್ತಿದ್ದಾರೆ. ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿನ ಗ್ರಾಮ ಪಂಚಾಯಿತಿ ಮುಂಭಾಗದಿಂದ ಸಾರ್ವಜನಿಕ ಆಸ್ವತ್ರೆರವರೆಗೂ ಇರುವ ಚರಂಡಿಯೇ ನೋಡೋಣ ಬನ್ನಿ.

ಕೇಂದ್ರ ಸರ್ಕಾರ. ಸ್ವಚ್ಚಭಾರತ್ ಯೋಜನೆಗಾಗಿ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದ್ದರೆ. ಇದು ಗೊತ್ತು ಗೊತ್ತಲ್ಲದಂತೆ ಗ್ರಾಮ ಪಂಚಾಯಿತಿ ಪಿಡಿಓ ನಡೆದುಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮುಂಭಾಗವಿರುವ ಚರಂಡಿಯಲ್ಲಿ ಗಿಡಗಳು ಕಸದರಾಶಿಯಿಂದ ಚರಂಡಿಯೇ ಮುಚ್ಚಿಹೋಗಿದೆ. ಇನ್ನೂ ಇಷ್ಟೇ ಅಲ್ಲ. ಸಾರ್ವಜನಿಕ ಅಸ್ಚತ್ರೆಯ ಪಕ್ಕ ರಸ್ತೆಯಲ್ಲಿ ಚರಂಡಿಗಳನ್ನು ಸ್ವಚ್ಚ ಮಾಡಿ ವರ್ಷಗಳೇ ಕಳೆದಿದೆ. ಸ್ಚಚ್ಚ ಗೊಳಿಸದೆ ಚರಂಡಿಯಲ್ಲಿ ಮನುಷ್ಯನ ಎತ್ತರದಷ್ಟು ಗಿಡಗಳು ಬೆಳೆದಿದ್ದು, ಹಾವುಗಳ ವಾಸಸ್ಥಾನವಾಗಿದೆ. ಇಲ್ಲಿನ ಜನರು ಸಂಜೆಯಾದರೆ ಮನೆಯಿಂದ ಹೊರೆಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಿನಲ್ಲಿ ಯೋಜನೆಗಳನ್ನು ಗ್ರಾಮದ ಮಟ್ಟಕ್ಕೆ ತಲುಪಿಸಲು ಸರ್ಕಾರಗಳ ಹೊಸದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದರೂ ಯೋಜನೆಗಳು ಗ್ರಾಮೀಣ ಪ್ರದೇಶಕ್ಕೆ ಸರಿ ತಲುಪುತ್ತಿಲ್ಲವೋ ಅಥವಾ ಅಧಿಕಾರಿಗಳ. ನಿರ್ಲಕ್ಷ್ಯ ವೋ ಗೊತ್ತಿಲ್ಲ. ಚುನಾವಣೆ ಸಂಧರ್ಭದಲ್ಲಿ ಮಾತ್ರ ರಾಜಕಾರಣಿಗಳು ಮತಯಾಚನೆ ಮಾಡುವಾಗ ಗ್ರಾಮಸ್ಥರು ತಕ್ಕಪಾಠ ಕಲಿಸಬೇಕು. ಇನ್ನೂಧರೂ ಗ್ರಾಮಪಂಚಾಯಿತಿ ಪಿಡಿಓ ಗ್ರಾಮಾಭಿವೃದ್ದಿ ಬಗ್ಗೆ ಮುಂದುಯಾಗುವವರೇ ಕಾದು ನೋಡಬೇಕಾಗಿದೆ.

ಬೈಟ್: 1) ನಾಗೇಶ ಗ್ರಾಮಸ್ಥರು 2) ಗ್ರಾಮದ ಮಹಿಳೆ .

LEAVE A REPLY

Please enter your comment!
Please enter your name here