ಸ್ವಚ್ಚತೆ ನಿರ್ವಹಣೆ ಕೊರತೆ

0
193

ಬಳ್ಳಾರಿ /ಹೊಸಪೇಟೆ : ಜಿಲ್ಲೆಯಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲೇ ವಿಶ್ವ ಪರಂಪರ ವ್ಯಾಪ್ತಿಗೆ ಒಳಪಡುವ ಹಂಪಿಯ ಪ್ರಕಾಶ ನಗರ, ಕಡ್ಡಿರಾಂಪುರ ಮತ್ತು ಪುನರ್‍ವಸತಿ ಕೇಂದ್ರದಲ್ಲಿ ಸಾರ್ವಜನಿಕರು ಸೇರಿದಂತೆ ಪ್ರವಾಸಿಗರು ಮಾರಕ ಡೆಂಗ್ಯೂ ಭೀತಿಗೆ ಭಯಬೀತರಾಗಿದ್ದಾರೆ.

ವಿಶ್ವ ಪರಂರಪರ ವ್ಯಾಪ್ತಿಯ ಚರಂಡಿಗಳು, ತಗ್ಗು ಪ್ರದೇಶಗಳು ಒಳಗೊಂಡಂತೆ ಕೆಲವು ಪಾರ್ಕಿಂಗ್ ಸ್ಥಳಗಳು ಸ್ವಚ್ಚತೆ ನಿರ್ವಹಣೆ ಕೊರತೆಯಿಂದ ಮಾರಕ ಡೆಂಗ್ಯೂಗೆ ಆವಾಸ ಸ್ಥಾನವಾಗಿ ಮಾರ್ಪಡುತ್ತಿವೆ. ಹಂಪಿಯ ದಾರ್ಮಿಕದತ್ತಿ ಇಲಾಖೆ,ಗ್ರಾಮ ಪಂಚಾಯತಿ ಮತ್ತು ಪ್ರಾಧಿಕಾರಕ್ಕೆ ಒಳಪಡುವ ಕೆಲವು ಪ್ರದೇಶಗಳು ಸ್ವಚ್ಚತೆ ಕಾಣದೆ ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತ ಸ್ಥಳಗಳಾಗಿ ಮಾರ್ಪಡುತ್ತಿರುವ ಹಿನ್ನಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಮುಂಬಾಗದ ಪ್ರವಾಸಿಗರ ಪಾರ್ಕಿಂಗ್ ಸ್ಥಳದಲ್ಲಿ ಕೊಚ್ಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ಯಾಗಿರುವುದನ್ನು ಕಂಡು ಪ್ರವಾಸಿಗರು ಭಯ ಬೀತರಾಗಿ ತಮ್ಮ ಮಕ್ಕಳನ್ನೂ ಹೊರಗಡೆ ಬಿಡದೆ ವಾಹನದಲ್ಲೇ ಕೂರಿಸುತ್ತಿದ್ದಾರೆ. ಪ್ರಸ್ತುತ ಪಾರ್ಕಿಂಗ್‍ ನಿಂದ ಧಾರ್ಮಿಕ ಇಲಾಖೆಗೆ ಉತ್ತಮ ಆದಾಯ ಬರುತ್ತಿದ್ದರು ಸಹ ಪಾರ್ಕಿಂಗ್ ನಿರ್ವಹಣೆ ಬಗ್ಗೆ ಮಾತ್ರ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೆಂಗಳೂರಿನ ಪ್ರವಾಸಿ ವಾಹನ ಚಾಲಕ ರಾಜೇಶ್ ಅಭಿಪ್ರಾಯ ಮಂಡಿಸಿದ್ದಾರೆ. ಜಿಲ್ಲಾದ್ಯಂತ ಸ್ವಚ್ಛತೆ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳಿಗೆ ಕಟ್ಟನಿಟ್ಟಿನ ಆದೇಶ ನೀಡಿದ್ದರು ಸಹ ಇಲ್ಲಿನ ಅಧಿಕಾರಿಗಳು ಮಾತ್ರ ಸ್ವಚ್ಚತೆ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಕೇವಲ ಆದಾಯಕ್ಕೆ ಸೀಮಿತರಾಗಿದ್ದಾರೆ ಎಂದು ಹೆಸರು ಹೇಳದ ಸ್ಥಳೀಯರೊಬ್ಬರು ವಿಷಾದ ವ್ಯಕ್ತ ಪಡಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ವಾಹನಗಳಿಗೆ 10ರೂ ಗಳಿಂದ 20ರೂಗಳ ವರಗೆ ಸುಂಕ ವಸೂಲಿ ಮಾಡುತ್ತಿರುವ ಇಲಾಖೆ ಪಾರ್ಕಿಂಗ್‍ಗೆ ಕನಿಷ್ಠ ನಿರ್ವಹಣೆಯನ್ನು ಮಾಡದೆ ನಿರ್ಲಕ್ಷಿದ್ದಾರೆ ಎಂದು ಅವರು ಹೇಳಿದ್ದಾರೆ. ಒಟ್ಟಾರೆ ಐತಿಹಾಸಿಕ ಹಂಪಿ ಗ್ರಾಮದ ಸ್ವಚ್ಚತೆಗೆ ಇಲಾಖೆಗಳು ಮುಂದಾಗಿ ಡೆಂಗ್ಯೂ ನಿಯಂತ್ರಿಸಿ ಗ್ರಾಮದ ಭಿವೃದ್ದಿಗೆ ಆದ್ಯತೆ ನೀಡಬೇಕೆಂದು ಸ್ಥಳೀಯರು ಜಿಲ್ಲಾದಿಕಾರಿಗಳನ್ನು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here