ಸ್ವಚ್ಚ ಭಾರತ ಅಭಿಯಾನ ಮರೆತರೇ..

0
340

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ಕೇಂದ್ರ  ಸಕಾ೯ರ ಸ್ವಚ್ಚ ಭಾರತ ಅಭಿಯಾನ ಅಡಿಯಲ್ಲಿ ಸಕಾ೯ರ ಕೋಟ್ಯಾಂತರ ರೂಪಾಯಿಗಳನ್ನು ಖಚು೯ ಮಾಡುತ್ತಿದೆ. ಗ್ರಾಮಗಳ ಸ್ವಚ್ಚತೆ ಮತ್ತು ನೈಮ೯ಲ್ಯ  ಕಾಪಾಡುವಲ್ಲಿ  ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ ಎಂಬುದಕ್ಕೆ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಇರುವ  ಶೌಚಾಲಯ ಗ್ರಹಗಳೇ ಸಾಕ್ಷಿ.

ಇಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ ಸ್ವಚ್ಚತೆ ಕಾಪಡುವ ಬಗ್ಗೆ ಸಾವ೯ಜನಿಕರಿಗೆ ಅರಿವು ಮೂಡಿಸುವ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ತಮ್ಮ ಕಚೇರಿಯ ಶೌಚಾಲಯಗಳನ್ನು ಸ್ವಚ್ಚ ಮಾಡಿಸುವುದರಲ್ಲಿ ವಿಫಲರಾಗಿದ್ದಾರೆ.

ಹೌದು ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಎರಡು ಶೌಚಾಲಯಗಳಿದ್ದು, ಸುಮಾರು ದಿನಗಳಿಂದ ಸ್ವಚ್ಚತೆ ಇಲ್ಲದೆ ಗಬ್ಬುನಾತ ಬೀರುತ್ತಿದೆ. ಮಲ ಮೂತ್ರ ವಿಸಜ೯ನೆ , ಕೊಳಕು ಪೇಪರ್ಗಳು, ಜೇಡರ ಭಲೆ ಕಟ್ಟಿರುವ ದೃಶ್ಯ, ನೀರಿನ ಅವ್ಯವಸ್ಥೆ ಒಟ್ಟಿನಲ್ಲಿ ಇದು ಗ್ರಾಮ ಪಂಚಾಯಿತಿ ಶೌಚಾಲಯವೇ ಎಂಬ ಅನುಮಾನ ಮೂಡುತ್ತಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಂದ ತಮ್ಮ ಕೆಲಸ ಕಾಯ೯ಗಳಿಗೆ ಬರುವ ಸಾವ೯ಜನಿಕರು ಶೌಚ ಮಾಡಲು ಜಾಗವಿಲ್ಲದೆ ಪರದಾಡುವಂತಹ ಸ್ಥಿತಿ ನಿಮಾ೯ಣ ವಾಗಿದೆ. ಇನ್ನೂ ಕಚೇರಿ ಸಿಬ್ಬಂದಿ ವಗ೯ದವರು ಮೂಗು ಮುಚ್ಚಿಕೊಂಡೆ ಅದೇ ಶೌಚಾಲಯಗಳನ್ನು ಬಳಸುವುದರಲ್ಲಿ ಯಶಸ್ವಿಯಾಗಿದ್ದಾರೆ ಅನ್ನಿಸುತ್ತದೆ.

ಸ್ವಚ್ಚ ಭಾರತ ಯೋಜನೆಯಡಿ ಪ್ರತಿ ಹಳ್ಳಿಗಳಲ್ಲೂ ಮನೆ ಮನೆಗೂ ಶೌಚಾಲಯ ನಿಮಿ೯ಸಿ ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಹೊರಟಿದೆ . ನಗರ ಸಭೆ , ಗ್ರಾಮ ಪಂಚಾಯಿತಿಗಳಿಂದ ಅರಿವು ಮೂಡಿಸಬೇಕು ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಸ್ವಚ್ಚತೆ ಕಾಪಾಡಲು ನಿಲ೯ಕ್ಷವಹಿಸಿದ್ದಾರೆ.

ಈ ಬಗ್ಗೆ ಪಿಡಿಓಗೆ ದೂರವಾಣಿ ಕರೆ ಮಾಡಿದರೆ ನಾಟ್ ರಿಚಬಲ್ ಹಾಗಿರುತ್ತದೆ. ಪಂಚಾಯಿತಿ ಕಚೇರಿಯ ಒಳಗೆ ಇದ್ದ ಹೆಸರು ಹೇಳಲು ಇಚ್ಚಿಸದ ಸಿಬ್ಬ೦ದಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ಕೊಳಕು ಗಬ್ಬುನಾರುತ್ತಿರುವ ಶೌಚಾಲಯಗಳನ್ನು ಗಮನಿಸಿದರೆ ಸವಾ೯ಜನಿಕರು ಶೌಚ ಗೃಹದಲ್ಲಿ ಸಮೀಪಿಸುತ್ತಿದ್ದಂತೆ ಮೂಗು ಮುಚ್ಚಿಕೊಳ್ಳುತ್ತಿದ್ದರೂ ಕಂಡುಕಾಣದಂತೆ ವರ್ತಿಸುತ್ತಿರುವ ಸೋಂಬೇರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೆಂಬ ಮಹದಾಸೆ ನಮ್ಮದು. ದಿನ ನಿತ್ಯ ಅಲ್ಲಿಗೆ ಬಂದು ಹೋಗುವವರಿಗೆ ರೋಗ-ರುಜನಗಳು ಹರಡುವ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ಬೇಜಾವಾಬ್ದಾರಿ ಮತ್ತು ನಿರ್ಲಕ್ಷತನವೇ ಕಾರಣ ಎಂದು ಸವಾ೯ಜನಿಕರು ದೂರಿದ್ದಾರೆ.

LEAVE A REPLY

Please enter your comment!
Please enter your name here