ಬೆಂಗಳೂರು/ಕೆ.ಆರ್.ಪುರ:- ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದರೇ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಮಾಜಿ ಶಾಸಕ ಎನ್.ಎಸ್.ನಂದೀಶ್ರೆಡ್ಡಿ ತಿಳಿಸಿದರು. ಕ್ಷೇತ್ರದ ಹೊಯ್ಸಳನಗರದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಸ್ವಚ್ಚ ಭಾರತ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಪ್ರತಿಯೊಬ್ಬರೂ ಕೂಡಾ ತಮ್ಮ ತಮ್ಮ ಮನೆಗಳ ಬಳಿಯ ರಸ್ತೆ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಎಷ್ಟೇ ಒತ್ತಡದ ಕೆಲಸಗಳಿದ್ದರೂ ಸಹ ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಿ ಆರೋಗ್ಯವಂತ ರಾಗಿ ಬಾಳುವಂತೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ನಗರದಾಧ್ಯಂತ ಭಾರಿ ಮಳೆ ಯಾಗುತ್ತಿದ್ದು ಎಲ್ಲೆಂದರಲ್ಲಿ ನೀರು ನಿಂತಿವೆ. ಅದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾಪರ್ಾಟಾಗುತ್ತಿವೆ. ಅಲ್ಲದೇ ತ್ಯಾಜ್ಯವೆಲ್ಲವು ಒಂದೆಡೆ ಸೇರುತ್ತಿರುವುದು ಕೂಡಾ ಸಾಂಕ್ರಾಮಿಕ ರೋಗಗಳಿಗೆ ದಾರಿಮಾಡಿಕೊಡುತ್ತವೆ. ಆದ್ದರಿಂದ ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು. ಮೊದಲು ನಮ್ಮ ಮನೆ, ನಂತರ ಊರು, ನಂತರ ರಾಜ್ಯ ಹೀಗೆ ಇಡೀ ಭಾರತವೇ ಸ್ವಚ್ಚ ವಾಗಿರ ಬೇಕೆಂಬ ಕನಸನ್ನು ಮಹಾತ್ಮ ಗಾಂಧೀಜಿಯವರು ಕಂಡಿದ್ದರು, ಅವರ ಕನಸನ್ನು ನನಸು ಮಾಡಲು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಶ್ರಮಿಸುತ್ತಿದ್ದಾರೆ. ಅವರ ಧ್ಯೇಯದೊಂದಿಗೆ ನಾವು ಕೈಗೂಡಿಸಿದರೇ ಶ್ವಚ್ಚಭಾರತವಾಗುವ ಸಮಯ ದೂರವೇನಿಲ್ಲ ಎಂದರು. ಈ ಸಂದರ್ಭ ದಲ್ಲಿ ಕ್ಷೇತ್ರಾಧ್ಯಕ್ಷ ಚಿದಾನಂದ, ವಾಡರ್್ ಅಧ್ಯಕ್ಷ ಕಿರಣ್ರೆಡ್ಡಿ, ಪ್ರಧಾನಕಾರ್ಯದಶರ್ಿ ಶ್ರೀರಾಮ್, ಯುವಮೋಚರ್ಾ ಅಧ್ಯಕ್ಷ ಬಾಲಾಜಿ, ಗಿರೀಶ್
ಬಾಬು, ಪ್ರವೀಣ್, ಪುನೀತ್ ಮತ್ತಿತರರು ಹಾಜರಿದ್ದರು.