ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಸಾಧ್ಯ

0
151

ಗುಡಿಬಂಡೆ: ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿದರೆ ನಾವು ಉತ್ತಮ ಆರೋಗ್ಯ ಪಡೆಯಬಹುದೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆನಂದ್ ತಿಳಿಸಿದರು. ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವಸತಿ ಗ್ರಹಗಳ ಬಳಿಯಿರುವ ತಾಜ್ಯ ವಸ್ತುಗಳನ್ನು ಸುಡುವ ಸ್ಥಳವನ್ನು ಸ್ವಚ್ಛ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ಮನೆಯಂತೆ ಭಾವಿಸಿ ಸ್ವಚ್ಛ ಮಾಡಿಕೊಳ್ಲಬೇಕು. ಆಗ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಉತ್ತಮ ವಾತವರಣವಿದ್ದಲ್ಲಿ ನಾವೆಲ್ಲ ಆರೋಗ್ಯವಂತರಾಗಿ ಬದುಕಬಹುದು. ಆದ್ದರಿಂದ ಎಲ್ಲರೂ ಸ್ವಚ್ಛತೆಯ ಕಡೆಗೆ ಹೆಚ್ವು ಗಮನ ಹರಿಸಬೇಕೆಂದರು.ನಂತರ ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ಮಾತನಾಡಿ, ಈಗಾಗಲೇ ಪರಿಸರ ನಾಶದಿಂದ ಭೂಮಿಯ ತಾಪ ಹೆಚ್ಚಾಗಿ ಜನತೆ ಸುಡು ಬಿಸಿಲಿನ ಅನುಭವ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮನೆಯ ಬಳಿ, ತಮ್ಮ ಜಮೀನಿಗಳ ಬಳಿ ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳೆಸಬೇಕು. ಜೊತೆಗೆ ತಮ್ಮ ಹುಟ್ಟು ಹಬ್ಬ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು. ಈಗಾಗಲೇ ನಾನು ಸ್ವ-ಇಚ್ಛೆಯಿಂದ ಗ್ರಾಮಗಳಿಗೆ ಭೇಟಿ ನೀಡಿ ಸಸಿಗಳನ್ನು ನೀಡಿ, ಗ್ರಾಮಸ್ಥರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.ಈ ವೇಳೆ ಶಿಕ್ಷಕ ಅಶೋಕ್, ಪರಿಸರ ಪ್ರೇಮಿ ಲಕ್ಷ್ಮೀಪತಿ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here