ಸ್ವಚ್ಛತೆ ಜೊತೆ ಆರೋಗ್ಯವನ್ನು ಕಾಪಾಡಿಕೊಳ್ಳಿ.

0
205

*ಸ್ವಚ್ಛತೆ ಜೊತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆನಂದ್ ಸಿಂಗ್ ಕರೆ*

ಬಳ್ಳಾರಿ /ಹೊಸಪೇಟೆ:ಸ್ವಚ್ಛತೆ ಎನ್ನುವುದು ಯಾರೋ ಹೇಳಿದಾಗ ಮಾಡುವ ಕೆಲಸವಲ್ಲ ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ನಮ್ಮ ಮನೆಯಷ್ಟೇ ಅಲ್ಲ ಇಡೀ ದೇಶವೇ ಸ್ವಚ್ಛವಾಗುತ್ತದೆ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.
ಹೊಸಪೇಟೆಯ 16ನೇ ವಾರ್ಡಿನ ಮದಕರಿ ನಾಯಕ ವೃತ್ತದ ರಾಮ ಟಾಕೀಸ್ ರಸ್ತೆಯಲ್ಲಿ ಸ್ವಚ್ಛಭಾರತ ಅಭಿಯಾನದ ಭಾಗವಾಗಿ ಶಾಸಕ ಆನಂದ್ ಸಿಂಗ್ ಸ್ವಚ್ಛತೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಸ್ವಚ್ಛತೆ ಇಲ್ಲದ ಕಾರಣ ವಿವಿಧ ಖಾಯಿಲೆಗಳು ಬರತೊಡಗಿವೆ. ಹೀಗಾಗಿ ನಗರ ಸಭೆಯ ಸಿಬ್ಬಂದಿ ಜೊತೆಗೆ ಸಹಕಾರ ನೀಡುವ ಮೂಲಕ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಗೃಹ ರಕ್ಷಕ ಸಿಬ್ಬಂದಿ ಮನೆಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಕಸವನ್ನು ಎಲ್ಲಂದರಲ್ಲಿ ಹಾಕದಂತೆ ಮನವಿ ಮಾಡಿದರು..
ಇನ್ನೂ ರಾಮಾ ಟಾಕೀಸ್ ಬಳಿ ತರಕಾರಿ, ಕಿರಾಣಿ ಅಂಗಡಿ , ಚಲುವಾದಿ ಕೇರಿ ಮತ್ತು ಮಾಂಸದ ಅಂಗಡಿಗಳ ವ್ಯಾಪಾರಿಗಳು ಜೊತೆ ಸಭೆ ನಡೆಸಿ ತಮ್ಮ ಮನೆ ಮತ್ತು ಅಂಗಡಿಯ ಕಸವನ್ನು ಪ್ರತಿ ದಿನ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ‌ ದಾತರ್ ಆಸ್ಪತ್ರೆಯ ಹತ್ತಿರ ಇರುವ ಕಸದ ಗುಂಡಿಗೆ ಹಾಕ ಬೇಕು ಎನ್ನವ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ವಾರ್ಡಿನ ಸದಸ್ಯೆ ಮುಮ್ತಾಜ್ ಬೇಗಂ, ರೂಪೇಶ್ ಕುಮಾರ,ಗೃಹರಕ್ಷಕ ದಳದ ಅಧಿಕಾರಿ ಗಿರೀಶ್, ಧರ್ಮೇಂದ್ರ ಸಿಂಗ್ ಶಶಿಧರ ಸ್ವಾಮಿ, ಸಂದೀಪ್ ಸಿಂಗ್, ಯುವ ಮುಖಂಡ ರವಿಕುಮಾರ್,ದಾದಾ ಕಲಂದರ್ ಸೇರಿದಂತೆ ಇತರರು ಇದ್ದರು..

LEAVE A REPLY

Please enter your comment!
Please enter your name here