ಸ್ವತಃ ತಾನೇ ನೇಗಿಲ ಹಿಡದ ಶಾಸಕ..

0
272

ಬಳ್ಳಾರಿ/ ಸಂಡೂರು:ಸಂಡೂರು ಶಾಸಕ ಈ.ತುಕಾರಾಂ ಇಂದು ಸ್ವತಃ ತಾವೇ ನೇಗಿಲ ಹಿಡಿದು ನೇಗಿಲಯೋಗಿಯಾಗಿದ್ದಾರೆ.
ಸಂಡೂರು ಭಾಗದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಪದೇ, ಪದೇ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುವುದು ಶಾಸಕರ ಗಮನಕಗಕೆ ತಂದಿದ್ದರು. ಹತ್ತಾರು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದ ಭೂಮಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪದೇ, ಪದೆ ಕಿರುಕುಳ ನೀಡಿ, ಟ್ರಂಚ್ ಹೊಡೆದು ರೈತರು ಹೊಲಗದ್ದೆಗಳಿಗೆ ಹೋಗದೇ ಇರುವುದು ಗಮನಕ್ಕೆ ಬಂದಿದೆ. ಇರುವ ಭೂಮಿಯಲ್ಲಿ ಉಳುಮೆ ಮಾಡಬೇಡಿ ಎಂದು ಹೇಳಿ ಹಗಲು, ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾವಲು ಕಾಯುವುದು ರೈತರಿಗೆ ಸಮಸ್ಯೆಯಾಗಿದೆ. ಬಡವರು ಮತ್ತು ಹಿಂದುಳಿದವರು ಪಟ್ಟಾ ಜಮೀನಿನಲ್ಲಿ ಉಳುಮೆ ಮಾಡುವುದನ್ನು ತಡೆಯುವುದು ಸರಿಯಲ್ಲ. ಈ ಕುರಿತು ನಾನು ಸರಕಾರದ ಜೊತೆ ಮಾತನಾಡುತ್ತೇನೆ ಎಂದು ಶಾಸಕ ತುಕಾರಾಂ ಹೇಳಿದರು.

LEAVE A REPLY

Please enter your comment!
Please enter your name here