ಸ್ವಾತಂತ್ರ್ಯೋತ್ಸವ ಅಂಗವಾಗಿ ಫುಟ್‌ಬಾಲ್ ಪಂದ್ಯಾವಳಿ…

0
134

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಫುಟ್‌ಬಾಲ್ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ವು 70ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಫುಟ್‌ಬಾಲ್ ಪಂದ್ಯಾವಳಿಯನ್ನ ಮಂಗಳವಾರ ಸಂಜೆ 4-00 ಗೆ ಜಿಲ್ಲಾ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಪಂದ್ಯಗಳ ನಡುವೆ ಪಂದ್ಯಾವಳಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಡಾ.ಕೆ.ಸುಧಾಕರ್ ರವರು ಉದ್ಘಾಟನೆ ಮಾಡಲಿದ್ದು. .ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಪಂದ್ಯಾವಳಿಯ ಪ್ರಯುಕ್ತ ಚಿಕ್ಕಬಳ್ಳಾಪುರದ ನಿವೃತ್ತ ಹಿರಿಯ ಫುಟ್‌ಬಾಲ್ ಆಟಗಾರರಿಗೆ ಸನ್ಮಾನವನ್ನ ಹಮ್ಮಿಕೊಳ್ಳಲಾಗಿದೆ. ಎಂದು ಚಿಕ್ಕಬಳ್ಳಾಪುರ ಫುಟ್‌ಬಾಲ್ ಕ್ಲಬ್ ನ ಕಾರ್ಯ ದರ್ಶಿ ಗ್ಯಾಸ್ ನಾಗರಾಜ.ಅಧ್ಯಕ್ಷರಾದ ಗಂಗಾಧರ್ ಮೂರ್ತಿ.ಉಪಾಧ್ಯಕ್ಷ ಇಸ್ಮಾಯಿಲ್. ಸಂತೋಷ್ ಪೊಳ್ಳು. ಲಯನ್ಸ್ ಕ್ಲಬ್ ನ ಬಾನುಪ್ರಕಾಶ್ ಪತ್ರಿಕಾ ಗೋಷ್ಠಿಯಲ್ಲಿದ್ದರು.

ವರದಿ:ಅರಿಕೆರೆ ಮುನಿರಾಜು
ನಮ್ಮೂರು ಟಿವಿ,ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here