ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವವೇ ಸಮಾಜವಾದ

0
283

ಬಳ್ಳಾರಿ/ಹೊಸಪೇಟೆ: ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ ಹೊಂದಿರುವ ಚೌಕಟ್ಟೇ ಸಮಾಜವಾದವಾಗಿದ್ದು, ಸಮಾಜವಾದದಿಂದ ಮಾತ್ರ ವ್ಯವಸ್ಥೆಯಲ್ಲಿನ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗುವುದು ಎಂದು ಹಿರಿಯ ಸಮಾಜವಾದಿ ಚಿಂತಕ ಪ್ರೊ.ಹನುಮಂತ ಪ್ರತಿಪಾದಿಸಿದರು.

ಕನ್ನಡ ವಿಶ್ವವಿದ್ಯಾಲಯ ರಾಮಮನೋಹರ ಲೋಹಿಯಾ ಅಧ್ಯಯನ ಪೀಠವು ಲೋಹಿಯಅವರ ಜನ್ಮದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸಸಮಾಜವಾದದ ಪ್ರಸ್ತುತತೆ ಕುರಿತು ಮಾತನಾಡಿದರು.

ಭ್ರಷ್ಟಾಚಾರ, ಜಾತಿ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಅ
ತ್ಯಾಚಾರ, ಭ್ರೂಣಹತ್ಯೆ, ರೈತರ ಆತ್ಮಹತ್ಯೆ, ತೃತೀಯ ಲಿಂಗಗಳನ್ನು ಒಳಗೊಂಡ ಲಿಂಗ ಅಸಮಾನತೆ, ಅಸಮರ್ಪಕ ಮೀಸಲಾತಿ ವ್ಯವಸ್ಥೆ ಇವೆಲ್ಲವನ್ನು ಸರಿಪಡಿಸಲು ಸಮಾಜವಾದ ಅಳವಡಿಸಿಕೊಳ್ಳಬೇಕಿದೆ ಎಂದರು.

ಸಮಾನ ದೂರ ಸಿದ್ಧಾಂತ, ಸಣ್ಣ ಯಂತ್ರಗಳ ಸಿದ್ಧಾಂತ, ಮೀಸಲಾತಿ ಸಿದ್ಧಾಂತ, ಜಾತಿವರ್ಗಗಳ ಸಮೀಕರಣ ಸಿದ್ಧಾಂತಗಳಂತಹ ಕೊಡುಗೆಗಳನ್ನು ಭಾರತದ ಸಂದರ್ಭಕ್ಕೆ ತಕ್ಕಂತೆ ಸಮಾಜವಾದದ ಮೂಲಕ ಲೋಹಿಯಾ ನೀಡಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಮೀಸಲಾತಿ, ವೃತ್ತಿ ಪ್ರತಿನಿಧಿಸುವಂತಹ ಕಾರ್ಯಾಧಾರಿತ ಜನತಂತ್ರವನ್ನು ಕೊನೆಗೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕ, ಸಾಂಸ್ಕೃತಿಕ ಜನತಂತ್ರ ಬೇಕಾಗಿದೆ ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿಮಾತನಾಡಿ, ಚಿಂತನೆಯ ಬಲ ಇಲ್ಲದ ಶ್ರಮ, ಶ್ರಮ ಇಲ್ಲದ ಚಿಂತನೆ ಪ್ರಯೋಜನ ಇಲ್ಲ ಎಂದು ಲೋಹಿಯಾ ಹೇಳಿದ್ದಾರೆ. ಅವರ ಚಿಂತನೆಗಳಿಗೆ ವಿರುದ್ಧವಾದ ಚಟುವಟಿಕೆಗಳು ಭಾರತದಾದ್ಯಂತ ನಡೆಯುತ್ತಿವೆ. ಜಾಗತೀಕರಣದ ನಂತರ ಲೋಹಿಯಾ ಚಿಂತನೆಗಳು ಬಲಗೊಳ್ಳಬೇಕಿತ್ತು. ಆದರೆ ಅದನ್ನು ಮುಚ್ಚಿ ಹಾಕಲಾಗುತ್ತಿದೆ. ಲೋಹಿಯಾ ವ್ಯಕ್ತಿಯಾಗಿ ಧಾರಣಶಕ್ತಿ. ಅವರನ್ನು ಬಳಸಿಕೊಳ್ಳುವುದರ ಮೇಲೆ ನಮ್ಮ ನಡುವೆ ಲೋಹಿಯಾ ಜೀವಂತವಾಗಿರುತ್ತಾರೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧಿ, ಲೋಹಿಯಾ, ಅಂಬೇಡ್ಕರ್ ಜಾತಿವ್ಯವಸ್ಥೆ ನಾಶ ಮಾಡುವ ಬೀಜ ಬಿತ್ತಿದರು. ಗಾಂಧಿವಾದ, ಸಮಾಜವಾದ, ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದಗಳು ನಮಗೆಷ್ಟು ಪ್ರಸ್ತುತ ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಬೇರೆ ಬೇರೆ ಸ್ವರೂಪದಲ್ಲಿ ಜಾತಿಗಳು ಹುನ್ನಾರ ನಡೆಸುತ್ತಿವೆ. ರಾಜಕೀಯ ಕ್ರಮಗಳು ಅದಕ್ಕೆ ಪೂರಕವಾಗಿರುತ್ತವೆ. ಅಭಿವೃದ್ಧಿ ಯೋಜನೆಗಳು, ಬಜೆಟ್ ಸಹ ಜಾತಿ ಮೇಲೆ ಅವಲಂಬಿತವಾಗಿದ್ದಾಗ ಸಮಾಜವಾದವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಅವರು. ಇದು ಪ್ರಜಾಪ್ರಭುತ್ವದಲ್ಲಿ ವೈಫಲ್ಯವನ್ನು ಬಿಂಬಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೀಠದ ಸಂಚಾಲಕ ಸಿ. ವೆಂಕಟೇಶ್ ಪ್ರಾಸ್ತಾವಿಕ ಮಾತನಾಡಿದರು.
ಕುಲಸಚಿವ ಡಾ. ಡಿ. ಪಾಂಡುರಂಗಬಾಬು ಉಪಸ್ಥಿತರಿದ್ದರು. ದೊಡ್ಡ ಹನುಮಂತಪ್ಪ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here