ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ..

0
241

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಹಿರಿಯ ಪತ್ರಕರ್ತೆ, ಸಾಹಿತಿ, ವಿಚಾರವಾದಿ ಗೌರಿಲಂಕೇಶ್ ಅವರನ್ನು ಹತ್ಯೆಗೈದಿರುವ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯ ಮಾಡುವ ಮೂಲಕ ಪ್ರತಿಭಟಿಸಿದರು.

ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣದಿಂದ) ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ತಹಸೀಲ್ದಾರರ ಕಛೇರಿಗೆ ತೆರಳಿ ಮನವಿಯನ್ನು ನೀಡಿದರು.

ವಿಚಾರವಂತರು ಹಾಗೂ ಬುದ್ದಿಜೀವಿಗಳ ಹತ್ಯೆಯಾಗುತ್ತಿರುವುದು ರಾಜ್ಯದ ಪ್ರಜಾಪ್ರಭುತ್ವ ವ್ಯವಸ್ತೆ ಶೋಚನೀಯ ಹಾದಿಯಾಗುತ್ತಿದೆ. ಈ ಹಿಂದೆಯೂ ಡಾ.ಎಂ.ಎಂ. ಕುಲಬುರ್ಗಿ ಅವರ ಕೊಲೆ ನಡೆದಿತ್ತು. ಮಂಗಳವಾರ ರಾತ್ರಿ ತಮ್ಮ ಮನೆಯ ಮುಂದೆಯೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಾಗಿದೆ.

ಕಲಬುರ್ಗಿ ಅವರ ಕೊಲೆ ಆರೋಪಿಗಳ ಇದುವರೆಗೂ ಪತ್ತೆ ಆಗಿಲ್ಲ. ಇದೇ ರೀತಿ ಮುಂದುವರಿದಲ್ಲಿ ಇಡೀ ರಾಜ್ಯದ ಜನತೆಗೆ ಸರ್ಕಾರದ ಮೇಲೆ ಇರುವಂತ ನಂಬಿಕೆ ಹೋಗುತ್ತದೆ. ದಿವಂಗತ ಗೌರಿಲಂಕೇಶ್ ರ ಕೊಲೆಯ ತನಿಖೆಯನ್ನು ಸಿಬಿಐ ಗೆ ಒಪ್ಪಿಸಿ ಬೇಗ ಹಂತಕರನ್ನು ಬಂಧಿಸಿ ನ್ಯಾಯ ದೊರಕಿಸುವಂತಾಗಲಿ ಎಂದರು.

LEAVE A REPLY

Please enter your comment!
Please enter your name here