ಹಂಪಿಕಲ್ಲಿನ ರಥದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ

0
579

ಬೆಂಗಳೂರಿನ/ ಕೆ.ಆರ್.ಪುರ:- ಕೆಆರ್ ಪುರ ಸಮೀಪದ ನಾಗವಾರ ಪಾಳ್ಯದಲ್ಲಿ ಶ್ರೀ ವಿನಾಯಕ ಗೆಳಯರ ಬಳಗದ ವತಿಯಿಂದ ಇತಿಹಾಸ ಪ್ರಸಿದ್ದ ಹಂಪಿ ಮಾದರಿಯ ಸೆಟ್ನ ಕಲ್ಲಿನ ರಥದಲ್ಲಿ ಗಣಪತಿಯನ್ನು ಕೂರಿಸಿ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಕಳೆದ 26 ವರ್ಷಗಳಿಂದ ಗಣಪತಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ಭಾರಿ 5 ಲಕ್ಷ ರೂ ವೆಚ್ಚದಲ್ಲಿ ಹಂಪಿಯ ಕಲ್ಲಿನ ರಥದ ಮಾದರಿಯ ಸೆಟ್ ನಿಮರ್ಿಸಿ, ಸೆಟ್ಗೆ ಸರಿಹೊಂದುವ ಕಲ್ಲಿನ ರೂಪದ ಮುತ್ತಿನ ಗಣಪತಿಯನ್ನು ಕೂರಿಸಿದ್ದು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷವು ಒಂದೊಂದು ವಿಭಿನ್ನ ರೀತಿಯ ಐತಿಹಾಸಿಕ ಸೆಟ್ಗಳಲ್ಲಿ ಗಣಪತಿಯನ್ನು ಕೂರಿಸುವುದರಿಂದ ಬೆಂಗಳೂರಿನ ವಿವಿಧ ಭಾಗಗಳ ನೂರಾರು ಜನರು ಇಲ್ಲಿಗೆ ಬೇಟಿ ನೀಡಿ ಗಣಪನ ದರ್ಶನ ಪಡೆದು ಸಂತಸ ಪಡುತ್ತಿದ್ದಾರೆ. ಇಲ್ಲಿಗೆ ಬರುವ ಭಕ್ತರು ಈ ಅದ್ದೂರಿ ಸೆಟ್ ಕಂಡು ಮನಸೂರೆಗೊಂದು ತಮ್ಮ ಮೊಬೈಲ್ಗಳಲ್ಲಿ ಪೊಟೋ ಹಾಗೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಸವರ್ೆ ಸಾಮಾನ್ಯವಾಗಿತ್ತು. ಈ ಭಾರಿ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು ಮದುರೈನಲ್ಲಿ ತಯಾರಿಸಿದ ಎಲ್ಇಡಿ ಸಿರಿಯಲ್ ಸೆಟನ್ನು ಮೊದಲು ಅಲ್ಲಿನ ದೇವಾಲಯದ ಸಮಾರಂಭಕ್ಕೆ ಬಳಸಿದ ಕನರ್ಾಟಕದಲ್ಲೆ ಇದೇ ಮೊದಲ ಭಾರಿಗೆ ನಾಗವಾರ ಪಾಳ್ಯದ ಮುಖ್ಯರಸ್ತೆಯಲ್ಲಿ ಅಲಂಕರಿಸಿದ್ದಿ ಇಲ್ಲಿನ ವಿಶೇಷವಾಗಿದೆ.

 

ಬೈಟ್: ಮನೋಜ್, ಸಂಘದ ಸದಸ್ಯ.

LEAVE A REPLY

Please enter your comment!
Please enter your name here