ಹಂಪಿಗೆ-ತೆಲುಗು ಚಿತ್ರ ನಟ ಶ್ರೀಕಾಂತ್ ಭೇಟಿ

0
194

ಬಳ್ಳಾರಿ  /ಹೊಸಪೇಟೆ:ವಿಶ್ವ ಪ್ರಸಿದ್ಧ ಹಂಪಿಗೆ ತೆಲುಗು ಚಿತ್ರರಂಗದ ನಾಯಕ ನಟ ಶ್ರೀಕಾಂತ್ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ವಿರುಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆದರು.

ಇಂದು ಬೆಳಗ್ಗೆ ಹಂಪಿಗೆ ತಮ್ಮ ಪತ್ನಿ ಹಾಗೂ ಪುತ್ರರೊಂದಿಗೆ ಆಗಮಿಸಿದ್ದ ತೆಲುಗು ಚಿತ್ರರಂಗದ ಖ್ಯಾತ ನಾಯಕ ನಟ ಶ್ರೀಕಾಂತ್, ಐತಿಹಾಸಿಕ ಹಂಪಿಯ ಶ್ರೀವಿರುಪಾಕ್ಷೇಶ್ವರಸ್ವಾಮಿ, ಹಂಪಮ್ಮ ಹಾಗು ಭುವನೇಶ್ವರಿ ದೇವಿಯ ದರ್ಶನ ಪಡೆದರು. ನಟ ಶ್ರೀಕಾಂತ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಅವರ ಅಭಿಮಾನಿಗಳು ಅವರ ಕೈಕುಲುಕಿ ಸೆಲ್ಫಿ  ತೆಗಿಸಿಕೊಂಡು, ಹಸ್ತಾಕ್ಷರ ಪಡೆದು ಸಂಭ್ರಮಿಸಿದ್ದು ಕಂಡು ಬಂದಿತು.

ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿಯ ಸುತ್ತಮುತ್ತ ಪ್ರದೇಶಗಳಲ್ಲಿ ಅನೇಕ ಚಿತ್ರಗಳನ್ನು ಚಿತ್ರೀಕರಣ ಮಾಡಿದ್ದೇನೆ. ಆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿಯ ದರ್ಶನ ಪಡೆಯಲು ಆಗಿರಲಿಲ್ಲ. ಅದಕ್ಕೆ ಈಗ ಕುಟುಂಬ ಸಮೇತರಾಗಿ ಬಂದು ಸ್ವಾಮಿಯ ದರ್ಶನ ಪಡೆದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನಟ ಶ್ರೀಕಾಂತ್ ಅವರ ಬಾಲ್ಯದ ಗೆಳೆಯ ಹಂಪಿ ಸಂಚಾರಿ ಠಾಣೆಯ ಪೊಲೀಸ್ ಪೇದೆ ಕೇಶವಮೂರ್ತಿ ಜೊತೆಗಿದ್ದರು.

LEAVE A REPLY

Please enter your comment!
Please enter your name here