ಹಂಪಿಗೆ ಬೇಟಿ ನೀಡಿದ ಸ್ಪೇನ್ ದೇಶದ ರಾಯಬಾರಿ

0
227

ಬಳ್ಳಾರಿ /ಹೊಸಪೇಟೆ:ಮುಂಬೈನ ರಾಯಬಾರಿ ಕಚೇರಿಯಲ್ಲಿರುವ ಸ್ಪೇನ್ ದೇಶದ ರಾಯಬಾರಿ ಆಂಡ್ರೆಸ್ ಮತ್ತು ಕೊಲಾಡೊ ದಂಪತಿಗಳು ವಿಶ್ವಪ್ರಸಿದ್ಧ ಹಂಪಿಗೆ ಶನಿವಾರ ಬೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.ಮೊದಲಿಗೆ ಪ್ರಸಿದ್ಧ ವಿಜಯವಿಠಲ ದೇವಸ್ಥಾನಕ್ಕೆ ಬೇಟಿ ನೀಡಿದ ಅವರು, ಕಲ್ಲಿನ ರಥ ದೇವಾಲದ ಶಿಲ್ಪ ವೈಭವವನ್ನು ಕಂಡು ಬೆರಗಾಗಿ ಹಂಪಿಯೊಂದು ನಿಜಕ್ಕೂ ಪ್ರಪಂಚದ ಹಲವು ಅಧ್ಭುತಗಳಲ್ಲಿ ಒಂದಾಗಿದೆ ಎಂದು ಪ್ರತಿಕ್ರಿಯಿಸಿದರು.ನಂತರ ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲ ಮಹಲ್, ಉಗ್ರನರಸಿಂಹ, ಬಡವಿ ಲಿಂಗ, ಕೃಷ್ಣ ದೇವಸ್ಥಾನ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಹೇಮಕೂಟ ವೀಕ್ಷಣೆ ಮಾಡಿದ ಅವರು, ಬಳಿಕ ಐತಿಹಾಸಿಕ ವಿರೂಪಾಕೇಶ್ವರ ದೇವಸ್ಥಾನವನ್ನು ವೀಕ್ಷಣೆ ಮಾಡಿದರು. ಇವರಿಗೆ ಪ್ರವಾಸಿ ಮಾರ್ಗದರ್ಶಕ ಬಸಪ್ಪ ಹಂಪಿಯ ಬಗ್ಗೆ ವಿವರಣೆ ನೀಡಿದರು

LEAVE A REPLY

Please enter your comment!
Please enter your name here