ಹಂಪಿಗೆ ಭೇಟಿಕೊಟ್ಟ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜ್‍ಮೊಹನ್ ಗಾಂಧಿ

0
259

ಬಳ್ಳಾರಿ/ಹೊಸಪೇಟೆ : ವಿಶ್ವ ಪರಂಪರ ತಾಣ ಹಂಪಿ ಪ್ರದೇಶಕ್ಕೆ ಮಹಾತ್ಮ ಗಾಂಧಿ ಅವರ ಮೊಮ್ಮಗ ರಾಜ್‍ಮೊಹನ್ ಗಾಂಧಿ ಕುಟುಂಬ ಶುಕ್ರವಾರ ಬೇಟಿ ನೀಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬಿಜಾಪುರ, ಬಾದಾಮಿ ಪ್ರವಾಸದ ನಂತರ ಹಂಪಿ ಸ್ಮಾರಕಗಳನ್ನು ಎರಡು ದಿನಗಳ ಮಟ್ಟಿಗೆ ವೀಕ್ಷಿಸಿಸಲು ಹೊಸಪೇಟೆ ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದರು. ಶನಿವಾರ ಕಮಲಾಪುರ ಪಟ್ಟಣದ ಪಕ್ಷಿ ಪ್ರೇಮಿ ಪಂಪಯ್ಯ ಮಳಿಮಠ ಅವರ ವನ್ಯ ಸಸಿಗಳ ತಾಣಕ್ಕೆ ಬೇಟಿ ನೀಡಿದ ಅವರು ವಿವಿದ ಬಗೆಯ ಪಕ್ಷಿಗಳ ಪೋಟೋಗಳು, ಸಸಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಬಳಿಕ ಅದೇ ದಿನ ತನ್ನ ಪತ್ನಿ ಉಷಾ ಗಾಂಧಿ ಅವರ ಹುಟ್ಟು ಹಬ್ಬವು ಇದ್ದ ಕಾರಣ ಅದೇ ಸ್ಥಳದಲ್ಲಿ ಎರಡು ಸಸಿಗಳನ್ನು ನೆಟ್ಟು ಪ್ರಕೃತಿ ಪ್ರೇಮವನ್ನು ಮೆರೆದರು. ನಂತರ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿ ಕರ್ನಾಟಕದಲ್ಲಿ ಮಂಗಳೂರು, ದಾರವಾಡ ಹಾಗೂ ಇತರ ಸ್ಥಳಗಳಿಗೆ ಬೇಟಿ ನೀಡಿದ್ದಾಗಿ ಹೇಳಿದರು. ನಾನೊಬ್ಬ ಸಾಮನ್ಯ ವ್ಯಕ್ತಿ ನಾನು ಸರಳತೆ ಹೆಚ್ಚು ಪ್ರಾಧನ್ಯತೆ ನೀಡುತ್ತೇನೆ ಆದ್ದರಿಂದ ಹಂಪಿಗೆ ಆಗಮಿಸಿದ್ದೇನೆ ಇಲ್ಲಿಯ ಜನರ ಸಂಸ್ಕøತಿ, ನಡೆ, ನುಡಿ ಸಂತಸ ತಂದಿದೆ ಎಂದರು. ಕುಟುಂಬದ ಸ್ನೇಹಿತರಾದ ಅಶೋಕ್ ಕುಮಾರ್ ಪತ್ನಿ ಬೆಂಟೇ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here