ಹಂಪಿಗೆ ಹರಿದು ಬಂದ ಭಕ್ತ ಸಾಗರ

0
219

ಬಳ್ಳಾರಿ /ಹೊಸಪೇಟೆ:ಶ್ರಾವಣಮಾಸದ ಕೊನೆ ಸೋಮವಾರದ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಹಂಪಿಗೆ ಬೇಟಿ ನೀಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದರು.
ಅಮಾವಾಸ್ಯೆ ಹಿಂದಿನ ಎರಡು-ಮೂರು ದಿನಗಳಿಂದಲೂ ಭಕ್ತರು, ಹಂಪಿ ಕಡೆ ಮುಖ ಮಾಡಿದ್ದು, ತಂಡೋಪತಂಡವಾಗಿ ಬೇಟಿ ನೀಡುತ್ತಿದ್ದಾರೆ. ವಿರೂಪಾಕ್ಷ ಪ್ರಾಂಗಣದಲ್ಲಿ ಭಾನುವಾರ ರಾತ್ರಿ ನಿದ್ರೆ ಕಳೆದು, ನಸುಕಿನಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಸಂಧ್ಯವಂದನೆ ಮುಗಿಸಿ, ಪಂಪಾಂಭಿಕೆ ಹಾಗೂ ವಿರೂಪಾಕ್ಷನ ದರ್ಶನ ಪಡೆದರು. ವಿದ್ಯಾರಣ್ಯ ಪೀಠದ ಬಳಿಯ ಅನ್ನಪೂರ್ಣೇಶ್ವರಿ ಅನ್ನಛತ್ರದಲ್ಲಿ ಭೋಜನ ಸವಿದರು. ಸಂಜೆ ರಜತ ನಂದಿ ಉತ್ಸವ ಸೇವೆಯನ್ನು ನೇರವೇರಿಸಿ, ವಿರೂಪಾಕ್ಷನಿಗೆ ಕಾಣಿಕೆಯನ್ನು ಸಲ್ಲಿಸಿದರು. ರಾಯಚೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ದಾವಣಗೇರಿ, ಹರಿಹರ ಮುಂತಾದ ಪ್ರದೇಶಗಳಿಂದ ಭಕ್ತರು, ಹಂಪಿಗೆ ಆಗಮಿಸಿದ್ದರು.
ಪೂಜಾ ಕೈಂಕರ್ಯ
ಶ್ರಾವಣಮಾಸದ ಕೊನೆಯ ಸೋಮವಾರ ಹಾಗೂ ಅಮಾವಾಸ್ಯೆ ನಿಮಿತ್ತವಾಗಿ ಐತಿಹಾಸಿಕ ಪುರಾತನ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಹಂಪಿಯ ಶ್ರೀ ವಿದ್ಯಾರಣ್ಯ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿಗಳ ಸಾನಿಧ್ಯದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ಜೆ.ಎನ್.ಮುರಳಿಧರ ಶಾಸ್ತ್ರಿ, ಜೆ.ಎಸ್.ಶ್ರೀನಾಥ ಶರ್ಮಾ ಹಾಗೂ ಪಿ.ಶ್ರೀನಾಥ ಶರ್ಮಾ, ವಿರೂಪಾಕ್ಷನಿಗೆ ಅಭಿಷೇಕ, ಪಂಚಾಮೃತ, ಮಹಾರುದ್ರೇಭಿಷಕ, ಅಲಂಕಾರ, ಸಹಸ್ರಾರ ನಾಮವಳಿ, ಮಹಾ ನೈವೇದ್ಯ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಿದರು.
ಅನ್ನಸಂತರ್ಪಣೆ:
ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘವತಿಯಿಂದ ವಿರೂಪಾಕ್ಷ ಪ್ರಾಂಗಣದಲ್ಲಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಂಪಿ ಕ್ಷೇತ್ರದ ಜಿಪಂ ಸದಸ್ಯ ಪ್ರವೀಣ್ ಸಿಂಗ್ ಚಾಲನೆ ನೀಡಿದರು.
ತಾಪೋ ಸದಸ್ಯ ಪಾಲಪ್ಪ, ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಬಿ.ನಾಗರಾಜ ಮುಖಂಡರಾದ ಗೋವಿಂದ ರಾಜ, ಬಾನು ಪ್ರಕಾಶ, ರವಿಕುಮಾರ, ಗೋಪಿ, ರಾಜಕುಮಾರ, ಲೋಕಾಭಿರಾಮ, ಗೋಪಾಲ, ಅಂಬಣ್ಣ ಹಾಗೂ ಬಸಪ್ಪ ಇತರರಿದ್ದರು.

LEAVE A REPLY

Please enter your comment!
Please enter your name here