ಹಂಪಿ ಉತ್ಸವದಲ್ಲಿ ಹಾಲಿ-ಟಾಲಿವುಡ್ ಗಾಯಕರ ಗಾನಸುಧೆ

0
174

ಬಳ್ಳಾರಿ/ಹೊಸಪೇಟೆ: ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಲು ಅಗತ್ಯ ಸಿದ್ಧತೆಯನ್ನು ಮಾಡಲಾಗುತ್ತಿದ್ದು, ಸ್ಥಳೀಯ, ರಾಜ್ಯ ಹಾಗೂ ಎಂಟು ದೇಶಗಳಿಂದ ಕಲಾವಿದರು ಸೇರಿದಂತೆ ಈ ಬಾರಿಯ ಉತ್ಸವದಲ್ಲಿ 405 ಕಲಾವಿದರ ತಂಡಗಳು ಭಾಗವಹಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವರು ಟಾಲಿವುಡ್ ಹಾಗೂ ಮೂವರು ಹಾಲಿವುಡ್ ಗಾಯಕರು ಉತ್ಸವದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕರು ಸಹ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 150ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಲಾಗಿದೆ. ಕಲಾವಿದರ ಬೇಡಿಕೆ ಹಾಗೂ ಜನರ ಇಚ್ಚೆಗೆ ತಕ್ಕಂತೆ ಉತ್ಸವ ಆಚರಿಸಲಾಗುತ್ತಿದೆ. ಎಲ್ಲಾ ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರು ಪಕ್ಷಾತೀತವಾಗಿ ಹಂಪಿ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ 8 ಕೋಟಿ.ರೂ ನೀಡಿದೆ. ಇನ್ನೂ ಪ್ರವಾಸೋಧ್ಯಮ ಇಲಾಖೆಯಿಂದ 1.5 ಕೋಟಿ.ರೂ. ಬರಬೇಕಿದೆ. ಸಾರಿಗೆ ಸೇರಿದಂತೆ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಶಾತ್ ಮನೋಹರ ಮಾತನಾಡಿ, ವಸಂತ ವೈಭವದಲ್ಲಿ 100ಕೂ ಅಧಿಕ ಕಲಾ ತಂಡಗಳು ಭಾಗವಹಿಸಿವೆ. ಹಂಪಿ ಬೈ ಸ್ಕೈ ಮುಂದುವರೆಸಲಾಗಿದೆ. ಲೇಸರ್ ಶೋ, ರಾಯಲ್ ಲೈಟ್ ಶೋ, ಕವಿಗೋಷ್ಠಿ, ಮಹಿಳಾ ಉತ್ಸವ, ಯುವಕವಿಗೋಷ್ಠಿ, ಕವಿ-ಕಾವ್ಯ-ಕುಂಚ-ಗಾಯನ, ಮಕ್ಕಳ ಉತ್ಸವ, ವಿಕಲಚೇತನರ ಉತ್ಸವ, ವಸ್ತು ಪ್ರದರ್ಶನ, ಕರ್ನಾಟಕ ವೈಭವ, ರಂಗೋಲಿ ಸ್ಪರ್ಧೆ ಹಾಗೂ ಮೆಹಂದಿ ಕಾರ್ಯಕ್ರಮ, ಗೋಡೆ ಬರಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ವೈಭವವನ್ನು ಸವಿಯಬೇಕು ಎಂದರು.

ಎಸ್ಪಿ ಆರ್.ಚೇತನ್ ಮಾತನಾಡಿ,  ಹಂಪಿ ಉತ್ಸವ ಉದ್ಘಾಟನೆಗೆ ಸಿಎಂ ಆಗಮಿಸುವುದರಿಂದ ಭದ್ರತೆ ಹೆಚ್ಚಿಸಲಾಗಿದೆ. ದ್ವಿಚಕ್ರ, ಕಾರ್, ಟ್ರ್ಯಾಕ್ಟರ್, ಬಸ್, ಮಿನಿ ಬಸ್ ಸೇರಿದಂತೆ ಲಘುವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹಂಪಿಯೊಳಗೆ ಗ್ರೀನ್ ಬಸ್ ಮತ್ತು ಹಂಪಿ ಹೊರಗೆ ರೆಡ್ ಬಸ್‌ಗಳು ಸಂಚರಿಸಲಿವೆ. 80ಕ್ಕೂ ಅಧಿಕ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಕಂಪ್ಲಿ, ಪಿ.ಕೆ.ಹಳ್ಳಿ, ಹೊಸಪೇಟೆಯಿಂದ ಉತ್ಸವಕ್ಕೆ ಬರುವವರಿಗೆ ಉಚಿತ. ರಿಯಾಯಿತಿ ಧರದಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಭದ್ರತೆಗಾಗಿ 50ಕ್ಕೂ ಅಧಿಕಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಜನರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಭದ್ರತೆ ಕೈಗೊಳ್ಳಲಾಗಿದೆ. 3 ಹೆಚ್ಚುವರಿ ಎಸ್ಪಿ, 10 ಡಿಎಸ್ಪಿ, 27 ಸರ್ಕಲ್ ಇನ್ಸಪೆಕ್ಟರ್, 80 ಸಬ್ ಇನ್ಸ್‌ಪೆಕ್ಟರ್, 160 ಸಹಾಯಕ ಸಬ್ ಇನ್ಸ್ಪೆಕ್ಟರ್, 1300 ಪೊಲೀಸ್, 150 ಮಹಿಳಾ ಪೊಲೀಸ್ ಹಾಗೂ 600 ಹೋಮ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು. ಹಂಪಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರವೀಣ್ ಸಿಂಗ್, ಸಿಇಒ ರಾಜೇಂದ್ರ ಉಪಸ್ಥಿತರಿದ್ದರು.

ಹಂಪಿ ಉತ್ಸವದ ವೇದಿಕೆಗಳು:1)ಎದುರುಬಸವಣ್ಣವೇದಿಕೆ(ಎಂ.ಪಿ.ಪ್ರಕಾಶ), 2)ಗಾಯಿತ್ರಿ ಪೀಠ ಮೈದಾನ ವೇದಿಕೆ, 3)ಶ್ರೀಕೃಷ್ಣವಿಜಯ ವೇದಿಕೆ, 4)ಶ್ರೀವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, 5)ಶ್ರೀಕಡಲೆಕಾಳು ಗಣಪ ವೇದಿಕೆ, 6)ಶ್ರೀಸಾಸಿವೆಕಾಳು ಗಣಪ ವೇದಿಕೆ, 7)ರತ್ನಕೂಟ ಮಹಾದ್ವಾರ ವೇದಿಕೆ 8) ಶ್ರೀ ಶಿವರಾಮ ಅವಧೂತ ಮಠ ಮುಂಭಾಗ, 9) ಹಜಾರರಾಮ ದೇವಾಲಯ ವೇದಿಕೆ, 10) ನೆಲಸ್ತರದ ಶಿವ ದೇವಾಲಯ ವೇದಿಕೆ ಸೇರಿದಂತೆ ಕರ್ನಾಟಕ ವೈಭವ ಧ್ವನಿಮತ್ತು ಬೆಳಕು ಕಾರ್ಯಕ್ರಮ ನೀಡುವ ಗಜಾಲಯ.

LEAVE A REPLY

Please enter your comment!
Please enter your name here