ಹಂಪಿ ಉತ್ಸವ ಜನೋತ್ಸವನ್ನಾಗಿಸಲು ಸಕಲ ಸಿದ್ದತೆ

0
208

ಬಳ್ಳಾರಿ /ಹೊಸಪೇಟೆ:ನವಂಬರ್ 3,4 ಹಾಗೂ 5 ರಂದು ನಡೆಯಲಿರುವ ಹಂಪಿ ಉತ್ಸವ-2017ನ್ನು ಕಳೆದ ಬಾರಿಗಿಂತಲೂ ಈ ಬಾರಿ ಅತ್ಯಂತ ವೈಭವಯುತವಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದು, ಜನೋತ್ಸವವಾಗಿ ಹೊರಹೊಮ್ಮಲಿದೆ ಎಂದು ಜಿಲ್ಲಾಧಿಕಾರಿ ರಾಮಪ್ರಶಾಂತ್ ಮನೋಹರ್ ಹೇಳಿದರು.
ತಾಲೂಕಿನ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಂಪಿ ಉತ್ಸವ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವದಲ್ಲಿ ಕರ್ನಾಟಕ ವೈಭವ, ಹಂಪಿ ಬೈನೈಟ್, ಚಲನಚಿತ್ರ ವೇದಿಕೆ, ಯೋಗ ವೇದಿಕೆ, ವಾಟರ್ ಸ್ಪೋರ್ಟ್ಸ್, ಬೈಕ್ ಕಾರು ರಾಲಿ ಸೇರಿದಂತೆ ವಿಶೇಷ ಕಾರ್ಯ ಕ್ರಮಗಳನ್ನು ನೀಡಲು ಅಗತ್ಯ ವೇದಿಕೆ ನಿರ್ಮಿಸಲಾಗುತ್ತದೆ. ಹಂಪಿ ಉತ್ಸವ ಜನೋತ್ಸವವನ್ನಾಗಿ ಆಚರಿಸಲು ಸಕಲ ಸಿದ್ದತೆ ಯನ್ನು ಕೈಗೊಳ್ಳಲಾಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಕಳೆದ ಸೆ.23 ರಂದು ನಡೆದ ಪೂರ್ವಬಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಸಿದ್ದತೆ ವರದಿ ತಯಾರಿಸಲು ತಿಳಿಸಲಾಗಿತ್ತು. ಅಧಿಕಾರಿಗಳು ಉತ್ಸವಕ್ಕೆ ಬೇಕಾದ ಅಗತ್ಯ ಸಿದ್ದತೆಗಳ ಕುರಿತು ವರದಿ ಸಿದ್ದಪಡಿಸಿ ಸಲ್ಲಿಸಿದ್ದಾರೆ. ವರದಿಯಾಧರಿಸಿ ನಿಗಧಿತ ಅವಧಿಯೊಳಗೆ ಕೆಲಸಗಳನ್ನು ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಲಾವಿದರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವೇದಕೆ ಸಿದ್ದಪಡಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ವೇದಿಕೆ ಮತ್ತು ವಾಹನಗಳ ಪಾರ್ಕಿಂಗ್ಗೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಜಿಲ್ಲೆ, ರಾಜ್ಯ, ಅಂತರಾಜ್ಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರು ಹಂಪಿ ಉತ್ಸವದಲ್ಲಿ ಕಲೆ ಪ್ರದರ್ಶನ ಮಾಡಲಿದ್ದಾರೆ. ಕಲಾವಿದರೊಂದಿಗೆ ಮಾತುಕತೆ ನಡೆದಿದೆ. ಕಳೆದ ಭಾರಿಯಂತೆ ಈಭಾರಿಯೂ ಕಂಪ್ಲಿ ಪಿ.ಕೆ.ಹಳ್ಳಿ ಹಾಗೂ ಹೊಸಪೇಟೆ ನಗರದಿಂದ ಹಂಪಿಗೆ ಬರುವವರಿಗೆ ಉಚಿತ ಬಸ್ ಸೇವೆ ಕಲ್ಪಿಸ ಲಾಗುತ್ತಿದೆ. ಕಳೆದ ಭಾರಿಯಾದ ಸಣ್ಣಪುಟ್ಟ ಅವ್ಯವಸ್ಥೆಯನ್ನು ಈ ಭಾರಿ ಮರುಕಳಿಸದಂತೆ ಮುನ್ನೆಚ್ಚರಿಕೆವಹಿಸಿ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದು. ಸಣ್ಣಪುಟ್ಟ ಸಮಸ್ಯೆ ಗಳಿರುತ್ತವೆ. ಪ್ಲಾಸ್ಟಿಕ್ ಫ್ಲೆಕ್ಸ್ ನಿಷೇಧವನ್ನು ಕಡ್ಡಾಯವಾಗಿ ಅನುಷ್ಠಾನ ಗೊಳಿಸಲಾಗುತ್ತದೆ. ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ಪ್ರೇಕ್ಷಕರಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಹಂಪಿಗೆ ಬಂದು ಹೋಗುವವರಿಗೆ 100 ರೂ. ಸಾರಿಗೆ ರಿಯಾಯಿತಿ ಟಿಕೇಟ್ ನೀಡಲು ತೀರ್ಮಾನಿಸ ಲಾಗಿದೆ. ಹಂಪಿ ಉತ್ಸವದಲ್ಲಿ ಕಳೆದ ಬಾರಿಗಿಂತಿ ವಿಭಿನ್ನವಾಗಿ ಉತ್ಸವ ಆಚರಿಸಲು ಸಕಲ ಸಿದ್ದತೆ ಮಾಡಿ ಕೊಳ್ಳಲಾಗುತ್ತಿದೆ ಎಂದರು.ಎಸ್ಪಿ ಆರ್. ಚೇತನ್, ಸಿಇಒ ರಾಜೇಂದ್ರ, ಸಹಾಯಕ ಆಯುಕ್ತ ಪ್ರಶಾಂತಕುಮಾರ ಮಿಶ್ರಾ, ತಹಸೀಲ್ದಾರ್ ಎಚ್.ವಿಶ್ವನಾಥ, ಡಿವೈಎಸ್ಪಿ ಶಿವಾರೆಡ್ಡಿ, ಹೊನ್ನವಾಡ್ಕರ್, ಸಿಪಿಐ ರವಿಕುಮಾರ್ ಸೇರಿದಂತೆ ಎಎಸ್ಐ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here