ಹಂಪಿ ಕನ್ನಡ ವಿವಿ ಕುಲಪತಿ ವಿರುದ್ಧ ವಾರೆಂಟ್ !?

0
192

ಬಳ್ಳಾರಿ /ಹೊಸಪೇಟೆ ಇತ್ತೀಚೆಗಷ್ಟೇ ಸೂಟ್ಕೇಸ್ ಹೇಳಿಕೆಯಿಂದ ರಾಜ್ಯಾದಂತ ಸುದ್ದಿಯಾಗಿದ್ದ ಹಂಪಿ ವಿವಿ ಕುಲಪತಿ ಪ್ರೊಫೆಸರ್ ಮಲ್ಲಿಕಾ ಘಂಟಿ ವಿರುದ್ಧ ಬೇರೊಂದು ಪ್ರಕರಣಕ್ಕೆ ಸಂಬಂಧಿಸ ಿದಂತೆ ಭದ್ರಾವತಿ ಎಸಿಜೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಪ್ರಕರಣ ದಾಖಲಿಸಿದವರ ಮೇಲೇ ವಾರಂಟ್ ..!

2015ರ ಅಕ್ಟೋಬರ್‌ನಲ್ಲಿ ಹಂಪಿ ಕನ್ನಡ ವಿವಿಗೆ ಕುಲಪತಿ ಆಗುವ ಮುನ್ನ ಕುವೆಂಪು ವಿವಿ ರಿಜಿಸ್ಟ್ರಾರ್ ಆಗಿದ್ದ ಮಲ್ಲಿಕಾ ಘಂಟಿಯನ್ನು ಎಂಎಂ ಕಲಬುರ್ಗಿ ರೀತಿಯಲ್ಲೇ ಹತ್ಯೆ ಮಾಡಬೇಕು ಎಂದು ಕುವೆಂಪು ವಿವಿಯ ಪ್ರಾಧ್ಯಾಪಕ ಹಾಗೂ ಮೂವರು ಸಿಬ್ಬಂದಿ ಮಾತನಾಡಿದ್ದ ಆಡಿಯೋ ದೊರಕಿತ್ತು. ಪ್ರಕರಣ ಕೂಡ ದಾಖಲಾಗಿತ್ತು. ಮಲ್ಲಿಕಾ ಘಂಟಿ ತಮಗೆ ಜೀವ ಬೆದರಿಕೆ ಇದೆ ಎಂದು 2015ರಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಲು ಬಾರದಹಿನ್ನಲೆ ಘಂಟಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದರೂ ನ್ಯಾಯಾಲಯಕ್ಕೆ ಗೈರಾದ ಕಾರಣ ಜಾಮೀನು ಸಹಿತ ವಾರಂಟ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here