ವಿನೂತನ ಪ್ರತಿಭಟನೆ….

0
249

ಬಳ್ಳಾರಿ: ಹಗರಿಬೊಮ್ಮನ ಹಳ್ಳಿ ತಾಲೂಕಿನಲ್ಲಿ ವಿನೂತನ ಪ್ರತಿಭಟನೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುರಿಗಳೊಂದಿಗೆ ಪ್ರತಿಭಟನೆ, ಖಾಲಿ ಕೊಡಗಳನ್ನು ಹಿಡಿದು ದನಕರುಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದರು.

ಜನ, ದನಕರುಗಳಿಗೆ ನೀರು ಮೇವಿಲ್ಲ, ತಾಲೂಕಿನಲ್ಲಿ ಈವರೆಗೆ ಗೋಶಾಲೆ ತೆರೆದಿಲ್ಲ. ಅಗತ್ಯ ಮೇವು ದೊರೆತಿಲ್ಲ ಜಿಲ್ಲಾಡಳಿತ ಕುರಿಗಾಹಿ, ರೈತರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಕೂಡಲೇ ಅಗತ್ಯ ನೀರು ಮತ್ತು ಗೋಶಾಲೆ ವ್ಯವಸ್ಥೆ ಮಾಡಬೇಕು ಮತ್ತು ರೈತರ ಸಾಲ‌ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಹಿಂದುಳಿದ ಘಟಕದ ಜಿಲ್ಲಾ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್,  ತಿಪ್ಪೇರುದ್ರಮುನಿ, ಮಲ್ಲಿಕಾರ್ಜುನ, ನರೇಗಲ್ಲ ಕೊಟ್ರೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here