ಹನುಮಾನ್ ಸಂಕೀರ್ತನಯಾತ್ರೆ…

0
236

ಬಳ್ಳಾರಿ/ಹೊಸಪೇಟೆ:ಮರಿಯಮ್ಮನಹಳ್ಳಿ ಪಟ್ಟಣದ ಮತ್ತು ಸುತ್ತಲಿನ ಗ್ರಾಮಗಳ ಹನುಮಮಾಲಾಧಾರಿಗಳಿಂದ ಸಂಜೆ ಹನುಮಾನ ಸಂಕೀರ್ತನಯಾತ್ರೆ ನಡೆಯಿತು .ಸಂಕೀರ್ತನಯಾತ್ರೆ ನಿಮಿತ್ತ ಪಟ್ಟಣದ ಮುಖ್ಯ ಬೀದಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಅಲ್ಲದೆ ಮಾಲಾಧಾರಿಗಳಿಂದ ಮುಖ್ಯ ಬೀದಿಯಲ್ಲಿ ಕೇಸರಿಧ್ವಜಗಳಿಂದ ಸಿಂಗರಿಸಲಾಗಿತ್ತು .ಮೆರವಣಿಗೆ ಯು ನಾಣಿಕೆರೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ಪಾದಗಟ್ಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗು ನಡೆಯಿತು. ಮಾಲಾಧಾರಿಗಳು ಸೇರಿದಂತೆ ಸಾರ್ವಜನಿಕ ರು ಪಾಲ್ಗೊಂಡು ಮೆರವಣಿಗೆ ಗೆ ಮೆರಗುತಂದರು .ಸಂಕೀರ್ತನಯಾತ್ರೆಯಲ್ಲಿ ಎಮ್ .ಬದ್ರಿನಾಥಶೆಟ್ಟಿ , ಶಶಿರಾಜ , ಪ್ರಶಾಂತ , ನಾಗೇಶ , ಕಾಕುಬಾಳುಮಾರುತಿ , ರಾಘವೇಂದ್ರ , ಪುಟ್ಟಸ್ವಾಮಿ , ಅನಿಲಕುಮಾರ , ಶ್ರೀ ನಿವಾಸ , ಬಂಗಾರಿ ಮಂಜುನಾಥ , ಮಜ್ಗಿನಾಗರಾಜ , ಪಕ್ಕೀರಪ್ಪ , ರಮೇಶ್ ಬ್ಯಾಲಕುಂದಿ , ನೂರಾರು ಮಾಲಾಧಾರಿಗಳು ಪಾಲ್ಗೊಂಡಿದ್ದರು .

LEAVE A REPLY

Please enter your comment!
Please enter your name here