ಹಬ್ಬದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ

0
216

ಬಳ್ಳಾರಿ /ಹೊಸಪೇಟೆ:ತಾಲೂಕಿನ ಕಮಲಾಪುರ ಪಟ್ಟಣದ ಹಳೇ ಬಸ್ ನಿಲ್ದಾಣದ ಸಂತೆ ಮಾರುಕಟ್ಟೆ ಮೈದಾನದಲ್ಲಿ ಶುಕ್ರವಾರ ಪಟ್ಟಣದ ಶ್ರೀಗಜಾನನ ಸೇವಾ ಸಮಿತಿ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡಲಾಯಿತು.
ಪಟ್ಟಣದ ಶ್ರೀಗಜಾನನ ಸೇವಾ ಸಮಿತಿ ವತಿಯಿಂದ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 3ನೇ ವರ್ಷದ ರಕ್ತದಾನ ಶಿಬಿರದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ 43 ಜನ ರಕ್ತದಾನ ಮಾಡಿದರು.ಪೂಜಾ ಕಾರ್ಯಕ್ರಮ ಮತ್ತು ಪ್ರಸಾದವಿನಿಯೋಗವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಂಪಯ್ಯಸ್ವಾಮಿ ಮಳಿಮಠ, ಶ್ರೀಗಜಾನನ ಸೇವಾ ಸಮಿತಿ ಅಧ್ಯಕ್ಷ ಕೇಶವಗೌಡ, ಕಾರ್ಯದರ್ಶಿ ತೇಜಮೂರ್ತಿ, ಖಜಾಂಚಿ ಸುರೇಶ, ಸದಸ್ಯರಾದ ಮಂಜುನಾಥ, ನಾಗರಾಜ ಗೌಳೇರ, ಕುಮಾರಸ್ವಾಮಿ, ಬಸವರಾಜ, ಗಂಗಾವತಿಯ ಸ್ವಾಮಿ ವಿವೇಕಾನಂದ ರಕ್ತ ಭಂಡಾರದ ಪಾಷಾ, ಮಲ್ಲಿಕಾರ್ಜುನ ಮತ್ತವರ ಸಿಬ್ಬಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here