ಹಬ್ಬ ಆಚರಸಿದೆ,ನೀರಿಗಾಗಿ ಹೋರಾಟ

0
164

ತುಮಕೂರು/ಪಾವಗಡ: ದೇಶಾದ್ಯಂತ ಜನರು ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾರೆ.ಆದರೆ ಪಾವಗಡದ ರೈತರಿಗೆ ಈ ಸಂಭ್ರಮ ಇಲ್ಲ.
ಯಾಕೆಂದರೆ ನೀರಿಗಾಗಿ ಇಲ್ಲಿಯ ಜನತೆ ಹಬ್ಬವನ್ನೂ ಲೆಕ್ಕಿಸದೇ ಧರಣಿ ಕುಳಿತಿದ್ದಾರೆ. ಹೌದು,
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ರೈತರು ಆರಂಭಿಸಿದ ಧರಣಿ ಇಂದು ೧೭ ನೇ ದಿನಕ್ಕೆ ತಲುಪಿದೆ. ರೈತ ಸಂಘ ಸೇರಿದಂತೆ ವಿವಿಧ ಸಂಘಗಳ‌ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಆದ್ರೂ ಸರ್ಕಾರ ಧರಣಿ ನಿರತರನ್ನು ಕಣ್ಣೆತ್ತಿಯೂ ನೋಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭಿಸುವವರೆಗೂ ತಮ್ಮ ಧರಣಿ ಮುಂದುವರೆಯುತ್ತದೆ ಎಂದು ಸಾರ್ವಜನಿಕರು, ರೈತರು ಹಬ್ಬ ಆಚರಿಸದೆ ಧರಣಿ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here