ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ

0
204

ತುಮಕೂರು/ಪಾವಗಡ :ಪಟ್ಟಣದ ಮಣೆಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ರೈತರು ಅಡ ಇಟ್ಟ ಚಿನ್ನಾಭರಣಗಳನ್ನು ಹರಾಜು ಹಾಕುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ತಹಶೀಲ್ದಾರ್ ತಿಪ್ಪೂರಾವ್ ಸೂಚಿಸಿರುತ್ತಾರೆ.

ಮಣೆಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ರೈತರು ಹತ್ತು ಸಾವಿರದಿಂದ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳ ಸಾಲ ಪಡೆದು ಪೂರ್ಣ ಪ್ರಮಾಣದ ಸಾಲ ತೀರಿಸಲಾಗದೆ ಹಾಗೂ ಚಿನ್ನದ ಆಭರಣಗಳನ್ನು ಬಿಡುಗಡೆ ಮಾಡಿಕೊಳ್ಳಲು ಸಾದ್ಯವಾಗದೆ ಪ್ರತಿ ತಿಂಗಳು ಬಡ್ಡಿ ಪಾವತಿ ಮಾಡುತ್ತಿದ್ದರೂ ರೈತರು ಹಾಗೂ ಜನಸಾಮಾನ್ಯರ ಚಿನ್ನಾಭರಣಗಳನ್ನು ಹರಾಜು ಹಾಕುತ್ತಿರುವುದನ್ನು ತಹಶೀಲ್ದಾರ್ ಗಮನಕ್ಕೆ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಂದಿದ್ದರು ತಕ್ಷಣವೇ ಮಣೆಪುರಂ ಗೋಲ್ಡ್ ಲೋನ್ ಶಾಖೆಯ ಶಾಖಾಧಿಕಾರಿಯನ್ನು ಕಛೇರಿಗೆ ಕರೆಸಿ ಲೀಡ್ ಬ್ಯಾಂಕ್ ಮ್ಯಾನೇಜರ್ ರೊಂದಿಗೆ ದೂರವಾಣೆ ಮೂಲಕ ಮಾತನಾಡಿ ಈ ಬಾರಿ ಉತ್ತಮ ಮಳೆ ಬೆಳೆಯಾದರೇ ನೀವು ನೀಡಿದ ಸಾಲವನ್ನು ಕೇಳಿ ಈ ಬಾರಿಯು ಮಳೆಬೆಳೆಯಾಗದೆ ರೈತರು ಹಾಗು ಸಾಮಾನ್ಯ ಜನರಿಗೆ ಕಿರುಕುಳ ನೀಡಿದ್ದು ಕಂಡು ಬಂದಲ್ಲಿ ಸರ್ಕಾರದ ಗಮನಕ್ಕೆ ತಂದು ನಿರ್ದಾಷ್ಯೀಣ್ಯ ಕ್ರಮ ನಿಮ್ಮ ಮೇಲೆ ಕೈಗೋಳ್ಳಲಾಗುವುದು ಎಂದು ತಹಶೀಲ್ದಾರ್ ತಿಪ್ಪೂರಾವ್ ಎಚ್ಚರಿಕೆ‌ ನೀಡಿದ್ದರು.

LEAVE A REPLY

Please enter your comment!
Please enter your name here