ಹಳ್ಳಕೊಳ್ಳ ರಸ್ತೆಗಳ ಆನೇಕಲ್..?

0
336

ಬೆಂಗಳೂರು/ ಆನೇಕಲ್ :ಪುರಸಭಾ ವ್ಯಾಪ್ತಿಯಲ್ಲಿನ ಅನೇಕ ರಸ್ತೆಗಳು ಗುಂಡಿಗಳ ಮಯವಾಗಿದ್ದೂ ದುರಸ್ಥಿ ಅಥವಾ ಕಾಮಗಾರಿ ಮಾಡಿಸಬೇಕಿರುವ ಸಂಬಂಧ ಪಟ್ಟ ಅಧಿಕಾರಿಗಳು. ಕಣ್ಮುಚ್ಚಿ ಕುಳಿತಂತಿದೆ.
ಅಧಿಕಾರಿಗಳೇ ದಿನ ನಿತ್ಯ ಸಂಚರಿಸುವ ರಸ್ತೆಮಾರ್ಗಗಳಾದ,ಗ್ಯಾರೇಜ್ ರೋಡ್.ಶ್ರೀ ರಾಮ ದೇವಾಲಯ ಮುಂಭಾಗ, ಹಳೇ ಪೋಲಿಸ್ ಠಾಣೆಯ ಮುಂಭಾಗ. ಕೆಇಬಿ ಮುಂಭಾಗ. ಲಕ್ಷ್ಮಿ ಚಿತ್ರ ಮಂದಿರದ ಮುಖ್ಯ ರಸ್ತೆ. ಪೊಲೀಸ್ ವಸತಿ ಗೃಹಗಳ ಮುಂಭಾಗ. ಶನಿ ಮಹಾತ್ಮ ದೇವಾಲಯದ ಮುಂಭಾಗ. ಐಬಿ ಮುಂಭಾಗ. ಡೈರಿ ಮುಂಭಾಗ. ಬಸ್ ಸ್ಟ್ಯಾಂಡ್ ಮುಂಭಾಗ. ತಿಮ್ಮರಾಯಸ್ವಾಮಿ ಆರ್ಚ್ ಮುಂಭಾಗ. ಹಳೇ ಗ್ಯಾಸ್ ಆಪಿಸ್ ಮುಂಭಾಗ. ಬಹದ್ದೂರ್ ಪುರಕಟ್ಟೆ ಮುಂಭಾಗ ಸೇರಿದಂತೆ ಇನ್ನೂ ಅನೇಕ ಕಡೇ ಗುಂಡಿಗಳಿಂದ ಬಾಯಿ ತೆರಿದುಕೂಂಡಿರುವ ರಸ್ತೆಗಳು ಜನಸಾಮಾನ್ಯರ ಪ್ರಾಣತೆಗೆಯಲು ಸಿದ್ದವಿರುವಂತಿವೆ. ಇದನ್ನು ನೋಡಿ,ನೋಡದಂತೆ ಜಾಣಕುರುಡು ಪ್ರದರ್ಶಿಸಿ ಕುಳಿತಿರುವ ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಈಕೂಡಲೇ ರಸ್ತೆಯ ಹಳ್ಳಗಳನ್ನು ಮುಚ್ಚಿ ರಸ್ತೆದುರಸ್ಥಿ ಮಾಡದೇ ಹೋದಲ್ಲಿ ಸಾರ್ವಜನಿಕರೇ ಕಛೇರಿಗೆ ಮುತ್ತಿಗೆ ಹಾಕುವ ಕಾಲದೂರವಿಲ್ಲ.
ಇನ್ನಾದರೂ ಎಚ್ಚೆತ್ತುಕೂಳ್ಳಿ ಅಧಿಕಾರಿಗಳೇ ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಬೇಡ ಈಗಾಗಲೇ ಮಳೆ ಬಂದು ಎಸ್ಟೂಜನ ಅಮಾಯಕ ಜನರು ರಸ್ತೆ ಗುಂಡಿಗಳಲ್ಲಿ ಬಿದ್ದು ಕೈಕಾಲುಗಳು ಮುರಿದು ಆಸ್ಪತ್ರೆ ಸೇರಿದ್ದಾರೆ. ಈಗಾಲದ್ರು ಕಣ್ಣು ಬಿಟ್ಟು ನೂಡಿ ನಿಮ್ಮ ಕರ್ತವ್ಯದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಿವಿರಿ ಎಂಬ ಆಶಾಭಾವನೆ ನಮ್ಮದು.

 

ವರದಿ: ಆನಂದ್,ಆನೇಕಲ್.

LEAVE A REPLY

Please enter your comment!
Please enter your name here